ಹೊಸದಿಲ್ಲಿ : ಮಾದಕದ್ರವ್ಯಗಳು ಯುವ ಪೀಳಿಗೆಯ ಭವಿಷ್ಯವನ್ನು ಹಾಳು ಮಾಡುತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಳವಳ ವ್ಯಕ್ತಪಡಿಸಿದ್ದಾರೆ.
ಚತ್ತೀಸ್‌ಗಡದ ರಾಯಪುರದಲ್ಲಿ ಮಾದಕದ್ರವ್ಯ ನಿಯಂತ್ರಣ ಬ್ಯೂರೋ (ಎನ್‌ಸಿಬಿ)ಯ ವಲಯ ಘಟಕ ಕಚೇರಿಯನ್ನು ವೀಡಿಯೊ ಮೂಲಕ ಉದ್ಘಾಟಿಸಿ ಮಾತನಾಡಿದ ಅಮಿತ್ ಶಾ ಅವರು ಭಾರತವನ್ನು ಡ್ರಗ್ಸ್ ಮುಕ್ತಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪವನ್ನು ಈಡೇರಿಸಬೇಕಾಗಿದೆ ಎಂದು ತಿಳಿಸಿದರು
ಮಾದಕದ್ರವ್ಯ ಜಾಲವನ್ನು ಅಮೂಲಾಗ್ರವಾಗಿ ಮೂಲೋತ್ಪಾಟನೆ ಮಾಡದಿದ್ದರೆ ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸುತ್ತವೆ ಎಂದು ತಿಳಿಸಿದರು.