
ಮನಾಮ: ಬೃಂದಾವಾಣಿ ಡ್ಯಾನ್ಸ್ ಅಕಾಡೆಮಿಯು ಸ್ಟಾರ್ ವಿಷನ್ ಇವೆಂಟ್ಸ್ ಬ್ಯಾನರ್ ಅಡಿಯಲ್ಲಿ ಮೇ 3 ರಂದು ಭರತನಾಟ್ಯಕ್ಕೆ ಪಾದಾರ್ಪಣೆ ಮಾಡಲಿದೆ. ಭರತನಾಟ್ಯ ಕಾರ್ಯಕ್ರಮ ಸಂಜೆ 5.30ಕ್ಕೆ ಬಹ್ರೇನ್ ಸಾಂಸ್ಕೃತಿಕ ಭವನದಲ್ಲಿ ಆರಂಭವಾಗಲಿದೆ.
ಅದ್ವಿಕಾ, ಅಶ್ವಿನ್, ಅಕ್ಷರ ಅಶ್ವಿನ್, ದೇಸ್ನಾ ಪ್ರವೀಣ್ ಕುಮಾರ್, ದಿಶಾ ಮಂಗಲ್ಪಾಡಿ, ನೇತ್ರಾ ರಾಮಕೃಷ್ಣನ್ ಮತ್ತು ರಿತಿಕಾ ಪ್ರಭುರವರು ಬಹ್ರೇನ್ ಮತ್ತು ತಮಿಳುನಾಡಿನ ಪ್ರಸಿದ್ಧ ನೃತ್ಯ ಅಧ್ಯಾಪಕರಾದ ಹಂಸುಲ್ ಗನಿ ಅವರ ಮಾರ್ಗದರ್ಶನದಲ್ಲಿ ಪಾದಾರ್ಪಣೆ ಮಾಡುತ್ತಿದ್ದಾರೆ.

ದವಾನಿ , ಅಲ್ ಜಜೀರಾ ಸಮೂಹದ ಅಧ್ಯಕ್ಷ ಅಬ್ದುಲ್ ಹುಸೇನ್ ಖಲೀಲ್ ಮುಖ್ಯ ಅತಿಥಿಯಾಗಿ, ರೆಡ್ ಹೌಸ್ ಮಾರ್ಕೆಟಿಂಗ್ ಅಧ್ಯಕ್ಷ ಜಾರ್ಜ್ ಎಫ್ ಮಿಡಲ್ ಟನ್, ಸ್ಟಾರ್ ವಿಷನ್ ಇವೆಂಟ್ಸ್ ಮತ್ತು ಮೀಡಿಯಾ ಗ್ರೂಪ್ ನ ಅಧ್ಯಕ್ಷ ಸೇತುರಾಜ್ ಕಡಕ್ಕಲ್, ನ್ಯೂ ಮಿಲೇನಿಯಂ ಸ್ಕೂಲ್ ನ ಪ್ರಾಂಶುಪಾಲ ಅರುಣ್ ಕುಮಾರ್, ಏಷ್ಯನ್ ಶಾಲೆಯ ಪ್ರಾಂಶುಪಾಲರಾದ ಮೊಲಿ ಮೊಮನ್ ಮತ್ತು ಹಲವಾರು ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
