ಮಹೇಂದ್ರಗಢ : ಇಂದು ಬೆಳಗ್ಗೆ ಶಾಲೆಗೆ ತೆರಳುತ್ತಿದ್ದ ಶಾಲಾ ಬಸ್ ಭೀಕರ ಅಪಘಾತಕ್ಕೆ (Bus Accident) ತುತ್ತಾಗಿ ಆರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶಾಲಾ ಬಸ್ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ 6 ಮಕ್ಕಳು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಚಾಲಕ ಪಾನಮತ್ತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಶಾಲಾ ಪ್ರಿನ್ಸಿಪಾಲ್ರನ್ನು ಬಂಧಿಸಲಾಗಿದೆ. ಈದ್ ರಜೆ ಇದ್ದರೂ ಇಂದು ಶಾಲೆ ತೆರೆದಿದ್ದು ಏಕೆ ಎಂಬ ಪ್ರಶ್ನೆ ಎದುರಾಗಿದೆ.
ಇಂದು ಶಾಲೆಯನ್ನು ಮುಚ್ಚಬೇಕಿತ್ತು ಎಂದಿರುವ ಅವರು, ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು. ‘ಇಂದು ಶಾಲೆ ತೆರೆಯಬಾರದಿತ್ತು, ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, ಇದಲ್ಲದೇ ಖಾಸಗಿ ಶಾಲೆಗಳಿಂದ ಸ್ವಯಂ ಪ್ರಮಾಣ ಪತ್ರ ಪಡೆದಿದ್ದೇವೆ. ಸಾರಿಗೆ ನಿಯಮಗಳ ಪ್ರಕಾರ ಶಾಲೆಗಳಿಗೆ ಸಾರಿಗೆ ವಾಹನಗಳು ಕಾರ್ಯನಿರ್ವಹಿಸುತ್ತಿವೆ ಎಂದು ಪ್ರಮಾಣ ಪತ್ರ ನೀಡಬೇಕು ಎಂದು ಸಚಿವೆ ತಿಳಿಸಿದ್ದಾರೆ