ತ್ರಿಶೂರ್ ಪೂರಂ ಉತ್ಸವದ ಸಿದ್ಧತೆಗಳ ಸಮಯದಲ್ಲಿ ತಿರುವಂಬಾಡಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟಗೊಂಡ ಘಟನೆ ಜರುಗಿದೆ.
ಈ ಸ್ಫೋಟದಲ್ಲಿ ಹದಿಮೂರು ಜನ ಮೃತಪಟ್ಟಿದ್ದಾರೆ. 27 ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅಪಘಾತದ ಸಮಯದಲ್ಲಿ ಸುಮಾರು 40 ಜನ ಆ ಸ್ಥಳದಲ್ಲಿದ್ದರು ಎಂಬುದು ಪ್ರಾಥಮಿಕ ಮಾಹಿತಿಯೊಂದು ಬಹಿರಂಗಗೊಂಡಿದೆ.
