ಮ್ಯೂನಿಚ್; ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಜರ್ಮನಿಯಲ್ಲಿ ಭಾರತದ ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ನೋಟವನ್ನು ಇಡೀ ಜಗತ್ತಿಗೆ ನೀಡಿದರು.
ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಜಾಗತಿಕವಾಗಿ ಪ್ರಜಾಪ್ರಭುತ್ವ ಅಪಾಯದಲ್ಲಿದೆಯೇ ಎಂದು ಕೇಳಿದಾಗ, ಅವರು ತಮ್ಮ ಶಾಯಿ ಹಚ್ಚಿದ ತೋರು ಬೆರಳನ್ನು ತೋರಿಸಿದರು. “ನಮಗೆ ಪ್ರಜಾಪ್ರಭುತ್ವ ಕೇವಲ ಒಂದು ತತ್ವವಲ್ಲ, ಅದು ಈಡೇರಿಸಿದ ಭರವಸೆಯಾಗಿದೆ” ಎಂದು ಬೆರಳು ತೋರಿಸಿ ಜೈಶಂಕರ್ ಹೇಳಿದರು.