ವಿಮಾನ(Flight) ಹತ್ತುವ ಮುಂಚೆ ಭಾಂಗ್ ಕುಡಿದಿದ್ದ ಪ್ರಯಾಣಿಕರೊಬ್ಬರು ಆಗಸದಲ್ಲಿ ವಿಮಾನದ ಬಾಗಿಲು ತೆಗೆಯಲು ಯತ್ನಿಸಿರುವ ಘಟನೆ ನಡೆದಿದೆ. ಇಂದೋರ್ನಿಂದ ಹೈದರಾಬಾದ್ಗೆ ತೆರಳುತ್ತಿದ್ದ ಇಂಡಿಗೋ(IndiGo) ವಿಮಾನದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ವಿಮಾನವು ಹೈದರಾಬಾದ್‌ನಲ್ಲಿ ಲ್ಯಾಂಡ್ ಆಗುವ ಸಮಯದಲ್ಲಿ ಈ ಘಟನೆ ಸಂಭವಿಸಿದೆ. 29 ವರ್ಷದ ವ್ಯಕ್ತಿ ವಿಮಾನ ಹತ್ತುವ ಮೊದಲು ‘ಭಾಂಗ್’ ಸೇವಿಸಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯುವ ಮುನ್ನ ಏರ್‌ಲೈನ್ಸ್ ಉದ್ಯೋಗಿಗಳೊಂದಿಗೆ ವಾಗ್ವಾದ ನಡೆಸಿದ್ದರು ಎಂದು ಅವರು ಹೇಳಿದರು. ಘಟನೆ ಮೇ 21ರಂದು ನಡೆದಿದೆ ಎಂದು ಹೇಳಲಾಗಿದೆ, ಈ ವ್ಯಕ್ತಿಯ ವಿರುದ್ಧ ಏರ್‌ಲೈನ್ಸ್ ಸಿಬ್ಬಂದಿ ದೂರು ದಾಖಲಿಸಿದ್ದಾರೆ ಮತ್ತು ಅವರನ್ನು ಬಂಧಿಸಲಾಗಿದೆ.