ಬೀಜಿಂಗ್ : ಚೀನಾಕ್ಕೆ ಶುಕ್ರವಾರ ಅಪ್ಪಳಿಸಿದ ಗೆಮಿ ಚಂಡಮಾರುತದಿಂದ ಸುಮಾರು 3 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ . ಸುಂಟರಗಾಳಿ ಮತ್ತು ಮಳೆಯಿಂದಾಗಿ ಫುಜಿಯಾನ್ ಪ್ರಾಂತದಲ್ಲೇ 2,90,000ಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ.
ಗ್ವಾಂಗ್‌ಡಾಂಗ್ ಪ್ರಾಂತದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶುಕ್ರವಾರ ಕೆಲವು ಪ್ರಯಾಣಿಕರ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ. ಝೆಜಿಯಾಂಗ್ ಪ್ರಾಂತದಲ್ಲಿ ರಸ್ತೆಗಳಲ್ಲಿ ನೆರೆನೀರನಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
ವೆನ್‌ಝೋವ್ ನಗರದಲ್ಲಿ ಸುಮಾರು 7 ಸಾವಿರ ಜನರನ್ನು ಸ್ಥಳಾಂತರಿಸಲಾಗಿ ರೆಡ್ ಅಲರ್ಟ್ ಘೋಷಿಸಲಾಯಿತು.