ಮನಾಮ: ಲೇಬರ್ ಫಂಡ್ (ತಮ್‌ಕೀನ್) ಬಹ್ರೇನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಮತ್ತು ಫೈನಾನ್ಸ್ (BIBF) ನೊಂದಿಗೆ ಹಣಕಾಸು ಸೇವಾ ವಲಯ ಮತ್ತು ಇತರ ಸಂಬಂಧಿತ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಕೌಶಲ್ಯಗಳನ್ನು ತರಬೇತಿ ಮತ್ತು ಅಭಿವೃದ್ಧಿಪಡಿಸಲು ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕುವುದಾಗಿ ತಿಳಿಸಿದೆ.
100 ಕ್ಕೂ ಹೆಚ್ಚು ಬಹ್ರೇನ್ ಸ್ವದೇಶೀಯರನ್ನು ಬೆಂಬಲಿಸಲು ಸಜ್ಜಾಗಿರುವ ಈ ಉಪಕ್ರಮವು, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಕಾನೂನು ಬಾಹಿರ ವಿಧಾನದ ಮೂಲಕ ಹಣ ಸಂಪಾದಿಸುವುದರ ವಿರುದ್ಧ ಸಂಬಂಧಿಸಿದ ವಿಶೇಷ ಪ್ರಮಾಣಪತ್ರಗಳನ್ನು ಪಡೆಯಲು ಬಹ್ರೇನ್ ವೃತ್ತಿಪರರಿಗೆ ಸಹಾಯಕವಾಗುವುದು.
ಕಾರ್ಮಿಕ ನಿಧಿಯ (ತಮ್‌ಕೀನ್) ಮುಖ್ಯ ಕಾರ್ಯನಿರ್ವಾಹಕಿ ಮಹಾ ಅಬ್ದುಲ್‌ಹಮೀದ್ ಮೊಫೀಜ್, ಕಾರ್ಮಿಕ ಮಾರುಕಟ್ಟೆಗೆ ಅಗತ್ಯವಿರುವ ವಿವಿಧ ಕ್ಷೇತ್ರಗಳು ಮತ್ತು ವಿಭಾಗಗಳಲ್ಲಿ ರಾಷ್ಟ್ರೀಯ ಪ್ರತಿಭೆಗಳಿಗೆ ತರಬೇತಿ ಮತ್ತು ಅರ್ಹತೆ ನೀಡುವಲ್ಲಿ ಈ ಪಾಲುದಾರಿಕೆಯ ಪ್ರಾಮುಖ್ಯತೆಯನ್ನು ನೀಡುತದೆ ಎಂದು ಆಭಿಪ್ರಾಯ ವ್ಯಕ್ತಪಡಿಸಿದರು.
ಬಹ್ರೇನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಮತ್ತು ಫೈನಾನ್ಸ್ (BIBF) ನ ಕಾರ್ಯನಿರ್ವಾಹಕ ಡಾ. ಅಹ್ಮದ್ ಅಬ್ದುಲ್‌ಹಮೀದ್ ಅಲ್ ಶೇಖ್, ರಾಷ್ಟ್ರೀಯ ಪ್ರತಿಭೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಕಾರ್ಮಿಕ ಮಾರುಕಟ್ಟೆಯ ಅವಶ್ಯಕತೆಗಳಿಗೆ ಅನುಗುಣವಾಗಿ ಅವರನ್ನು ಸಿದ್ಧಪಡಿಸುವಲ್ಲಿ ತಮ್‌ಕೀನ್‌ನ ಸಕ್ರಿಯ ಪಾತ್ರವನ್ನು ಶ್ಲಾಘಿಸಿದರು.