ರುದ್ರಪ್ರಯಾಗ್ : ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯ ಗೌರಿಕುಂಡ-ಕೇದಾರನಾಥ್ ಚಾರಣ ದಾರಿಯ ಚಿರ್ಬಾಸಾ ಪ್ರದೇಶದ ಸಮೀಪ ಭೂಕುಸಿತ ಸಂಭವಿಸಿದೆ.
ಗೌರಿಕುಂಡದಿಂದ ಇಂದು ಬೆಳಗ್ಗೆ ತಮ್ಮ ಯಾತ್ರೆ ಆರಂಭಿಸಿದ ಮೂವರು ಯಾತ್ರಿಗಳಾದ ಮಹಾರಾಷ್ಟ್ರ ನಾಗಪುರದ ಕಿಶೋರ್ ಅರುಣ್ ಪರಾಟೆ (31), ಜಲ್ನಾದ ಸುನೀಲ್ ಮಹಾದೇವ್ ಕಾಳೆ (24) ಹಾಗೂ ರುದ್ರಪ್ರಯಾಗ್ ತಿಲ್ವಾರದ ಅನುರಾಗ್ ಬಿಸ್ತ್ ಸಾವನ್ನಪ್ಪಿದ್ದಾರೆ . 8 ಮಂದಿ ಯಾತ್ರಿಗಳು ಗಾಯಗೊಂಡಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡು , ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ