ಮುಂಬೈ : ಅನಂತ್ ಅಂಬಾನಿ-ರಾಧಿಕಾ ಮದುವೆಗೆ ಬಾಂಬ್ ಬೆದರಿಕೆ ಹಾಕಿದ ಆರೋಪಿ ವೈರಲ್ ಶಾ , 25 ವರ್ಷದ, ಗುಜರಾತ್ ಮೂಲದ ವ್ಯಕ್ತಿ, ವೃತ್ತಿಯಲ್ಲಿ ಎಂಜಿನಿಯರ್ನನ್ನು ಗುಪ್ತಚರ ಇಲಾಖೆ ಸಹಾಯದಿಂದ ಪತ್ತೆಹಚ್ಚಿ ಮಂಗಳವಾರ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ದೇಶದ ಪ್ರಮುಖ ನಾಯಕರು, ಸೆಲೆಬ್ರಿಟಿಗಳು, ಕ್ರಿಕೆಟಿಗರು ಸೇರಿ ಸಾವಿರಾರು ಗಣ್ಯರು ಭಾಗವಹಿಸಿದ್ದ ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದ ಸಮಯದಲ್ಲಿ ವೈರಲ್ ಶಾ ಬಾಂಬ್ ಬೆದರಿಕೆ ಹಾಕಿದ್ದ.
ಜುಲೈ 13ರಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಆರೋಪಿ, ಅಂಬಾನಿ ಮದುವೆಯಲ್ಲಿ ಬಾಂಬ್ ಸಿಡಿದ ನಂತರ ನಾಳೆ ಅರ್ಧ ಜಗತ್ತು ತಲೆಕೆಳಗಾಗಲಿದೆ ಎಂದು ನನ್ನ ಮನಸ್ಸು ಹೇಳುತ್ತಿದೆ ಅಂತ ಬರೆದಿದ್ದ.