ಇನ್ಫಾರ್ಮರ್ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಆರೋಪಿ ಸ್ಮಗ್ಲರ್ ನದೀಮ್ ಮತ್ತು ಆತನ ಸಹಚರ ಫುಜೈನ್ ಎಂಬಾತನನ್ನು ಸಿಹಾನಿಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ. ಇವರಿಬ್ಬರು ಚಿನ್ನವನ್ನುರಾಂಪುರ ಜಿಲ್ಲೆಗೆ ತೆಗೆದುಕೊಂಡು ಹೋಗುತ್ತಿದ್ದರು ಎಂದು ತಿಳಿದುಬಂದಿದೆ.
ಚಿನ್ನವನ್ನು ಕಳ್ಳಸಾಗಣೆ ತೊಡಗಿದ್ದ ಇಬ್ಬರು ಕಳ್ಳಸಾಗಣೆದಾರರನ್ನು ಗಾಜಿಯಾಬಾದ್ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ ಸೌದಿ ಅರೇಬಿಯಾದಿಂದ 400 ಗ್ರಾಂ ಚಿನ್ನವನ್ನು ಮಾತ್ರೆಗಳ ರೂಪದಲ್ಲಿ ನುಂಗಿ ಭಾರತಕ್ಕೆ ತಂದಿದ್ದರು.
ನದೀಮ್ ಮತ್ತು ಆತನ ಪಾರ್ಟ್ನರ್ ಫುಜೈನ್ ಸೌದಿ ಅರೇಬಿಯಾದಿಂದ ಚಿನ್ನವನ್ನು ಕಳ್ಳಸಾಗಣೆ ಮಾಡುವ ವ್ಯವಹಾರದಲ್ಲಿ ದೀರ್ಘಕಾಲ ತೊಡಗಿಸಿಕೊಂಡಿದ್ದರು ಎಂದು ತಿಳಿದುಬಂದಿದೆ. ಈ ಬಾರಿಯೂ ಈ ಇಬ್ಬರು ಸ್ಮಗ್ಲರ್‌ಗಳು ಸೌದಿಯಿಂದ ಮಾತ್ರೆ ರೂಪದಲ್ಲಿ ಸುಮಾರು 25 ಲಕ್ಷ ರೂಪಾಯಿಯ ಚಿನ್ನವನ್ನು ನುಂಗಿ ಹೊಟ್ಟೆಯಲ್ಲಿಟ್ಟುಕೊಂಡು ಬಂದಿದ್ದರು. ಪೊಲೀಸ್ ಮೂಲಗಳ ಪ್ರಕಾರ, ಮುಂಬೈನಲ್ಲಿ ತಪಾಸಣೆಗಾಗಿ ಅವರನ್ನು ನಿಲ್ಲಿಸಲಾಯಿತು ಆದರೆ ಅವರು ಅಲ್ಲಿಂದ ತಪ್ಪಿಸಿಕೊಂಡು ವಿಮಾನದಲ್ಲಿ ದೆಹಲಿಗೆ ತಲುಪಿದ್ದರಯ ಮತ್ತು ಅಲ್ಲಿಂದ ಗಾಜಿಯಾಬಾದ್ ಬಸ್ ನಿಲ್ದಾಣವನ್ನು ತಲುಪಿದ್ದರು.
ಇಬ್ಬರೂ ಕ್ರಿಮಿನಲ್‌ಗಳು ರಾಮನಗರಕ್ಕೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದಾಗ ಕ್ರೈಂ ಬ್ರಾಂಚ್ ತಂಡವು ಅನುಮಾನದ ಮೇಲೆ ಅವರನ್ನು ಹಿಡಿದಿದೆ. ಸದ್ಯ ಆರೋಪಿಗಳಿಬ್ಬರ ಹೊಟ್ಟೆಯಿಂದ ಮಾತ್ರೆಗಳ ರೂಪದಲ್ಲಿ 400 ಗ್ರಾಂ ಚಿನ್ನ ಪತ್ತೆಯಾಗಿದ್ದು, ಇದರ ಮೌಲ್ಯ 25 ಲಕ್ಷ ರೂಪಾಯಿಯಾಗಿದೆ. ಆರೋಪಿಗಳ ಬಗ್ಗೆ ಕಸ್ಟಮ್ಸ್ ಇಲಾಖೆಗೆ ಮಾಹಿತಿ ನೀಡಿ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಇಬ್ಬರು ಆರೋಪಿಗಳ ಪೈಕಿ ಒಬ್ಬ ಆರೋಪಿ ಈಗಾಗಲೇ ಗಲ್ಫ್ ದೇಶಗಳಿಂದ ಇದೇ ರೀತಿ ಸುಮಾರು ಆರು ಬಾರಿ ಚಿನ್ನ ತಂದಿದ್ದಾನೆ. ಚಿನ್ನವನ್ನು ಹೊರತೆಗೆದ ನಂತರ ಅವರನ್ನು ಜೈಲಿಗೆ ಕಳುಹಿಸಲು ಸಿದ್ಧತೆ ನಡೆಸಲಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ನದೀಮ್ ಚಿನ್ನದ ಕಳ್ಳಸಾಗಣೆಯಲ್ಲಿ ತೊಡಗಿದ್ದು, ಫುಜೈಲ್ ರಾಂಪುರದಲ್ಲಿಯೇ ಬಿರಿಯಾನಿ ಸ್ಟಾಲ್ ನಡೆಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.