ನವದೆಹಲಿ: ಗುಜರಾತ್ ಕರಾವಳಿ ಆಚೆಗಿನ ಸಾಗರ ಗಡಿಭಾಗದಲ್ಲಿ ಸಾಗಿ ಬರುತ್ತಿದ್ದ ಪಾಕಿಸ್ತಾನದ ದೋಣಿಯೊಂದನ್ನು ಭಾರತದ ಕರಾವಳಿ ಕಾವಲು ಪಡೆ (ICG- Indian coast guard) ವಶಕ್ಕೆ ತೆಗೆದುಕೊಂಡಿದೆ. 600 ಕೋಟಿ ರೂ ಮೌಲ್ಯದ, 86 ಕಿಲೋ ಮಾದಕವಸ್ತುಗಳನ್ನು (narcotics) ಜಫ್ತಿ ಮಾಡಲಾಗಿದೆ ಎಂಬ ಮಾಹಿತಿಯನ್ನು ಐಸಿಜಿ ಭಾನುವಾರ ನೀಡಿದೆ.
ಗುಪ್ತಚರ ಮಾಹಿತಿಯೊಂದರ ಮೇರೆಗೆ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಮತ್ತು ಕರಾವಳಿ ಕಾವಲು ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದಿಂದ ಭಾರತಕ್ಕೆ ನಾರ್ಕೋಟಿಕ್ಸ್ ಸಾಗಿಸುತ್ತಿದ್ದ ದೋಣಿಯನ್ನು ತಡೆದು ನಿಲ್ಲಿಸಿವೆ. ದೋಣಿಯಲ್ಲಿದ್ದ 14 ಮಂದಿ ಪಾಕ್ ನಾಗರಿಕರು ಮತ್ತು ಡ್ರಗ್ಸ್ ಅನ್ನು ಭಾರತದ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿವೆ.