ಟೆಹ್ರಾನ್: ಸಿರಿಯಾದಲ್ಲಿ ಸಿರಿಯಾದ ಸೇನೆ ಮತ್ತು ಹಯಾತ್ ತಹ್ರೀರ್ ಅಲ್-ಶಾಮ್ಸಂ ಘಟನೆಯ ಉಗ್ರರರ ನಡುವಿನ ಕಾಳಗದಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ನ ಜನರಲ್ ಸೇರಿದಂತೆ ಸುಮಾರು 200 ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾನಿಟರ್ ವರಿದಿ ಮಾಡಿದೆ.
ಶಿಯಾ-ಬಹುಸಂಖ್ಯಾತ ಇರಾನ್‌ನಲ್ಲಿ ‘ತಕ್ಫಿರಿ’ ಎಂಬ ಪದವು ಸಾಮಾನ್ಯವಾಗಿ ಜಿಹಾದಿಗಳು ಅಥವಾ ಮೂಲಭೂತವಾದ ಸುನ್ನಿ ಇಸ್ಲಾಂನ ಬೆಂಬಲಿಗರನ್ನು ಉಲ್ಲೇಖಿಸುತ್ತದೆ. ಅಲ್-ಖೈದಾದ ಮಾಜಿ ಸಿರಿಯಾ ಶಾಖೆಯ ನೇತೃತ್ವದ ಹಯಾತ್ ತಹ್ರೀರ್ ಅಲ್-ಶಾಮ್ (ಎಚ್‌ಟಿಎಸ್) ಅಲೆಪ್ಪೊ ಪ್ರಾಂತ್ಯದಲ್ಲಿ ಬುಧವಾರ ಸೇನೆಯ ಮೇಲೆ ಹಠಾತ್ ದಾಳಿ ನಡೆಸಿದೆ.