ನೆದರ್ಲೆಂಡ್ನ ಆಮ್ಸ್ಟರ್ಡಾಂನ ಶಿಪೋಲ್ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ಗೆ ಸಿದ್ಧವಾಗಿದ್ದ ವಿಮಾನದ ಇಂಜಿನ್ನೊಳಗೆ ಕಾಲುಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ನೆದರ್ಲೆಂಡ್ನ ಆಮ್ಸ್ಟರ್ಡಾಂನ ಶಿಪೋಲ್ ವಿಮಾನ ನಿಲ್ದಾಣದಲ್ಲಿ ವಿಮಾನದ ಇಂಜಿನ್ಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ. KL1341 ವಿಮಾನವು ಡೆನ್ಮಾರ್ಕ್‌ನ ಬಿಲ್ಲುಂಡ್‌ಗೆ ಟೇಕ್ ಆಫ್ ಮಾಡಲು ಸಿದ್ಧವಾಗಿತ್ತು. ಆಗ ಅಪಘಾತ ಸಂಭವಿಸಿದೆ.
ಟೇಕ್ ಆಫ್ ಆಗುವ ಮೊದಲು ಜೆಟ್‌ನ ತಿರುಗುವ ಟರ್ಬೈನ್‌ಗೆ ವ್ಯಕ್ತಿ ಬಿದ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ, ಇದು ಅಪಘಾತವೋ ಅಥವಾ ಆತ್ಮಹತ್ಯೆಯೋ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ವರದಿಯ ಪ್ರಕಾರ , ಮೇ 29 ರ ಮಧ್ಯಾಹ್ನ, ಕೆಎಲ್ 1341 ವಿಮಾನವು ಡೆನ್ಮಾರ್ಕ್‌ನ ಬಿಲ್ಲುಂಡ್‌ಗೆ ಟೇಕ್ ಆಫ್ ಮಾಡಲು ಸಿದ್ಧವಾಗಿತ್ತು. ಆಗ ಅಪಘಾತ ಸಂಭವಿಸಿದೆ.