ನ್ಯೂಯಾರ್ಕ್: ಎಲ್ಲೆ ನಿಯತಕಾಲಿಕೆಯ ಮಾಜಿ ಸಲಹೆ ಅಂಕಣಕಾರರು ಹಾಗೂ ಲೇಖಕರಾದ ಇ. ಜೀನ್ ಕ್ಯಾರೊಲ್ ಅವರನ್ನು ಲೈಂಗಿಕವಾಗಿ ನಿಂದಿಸಿದ ಮತ್ತು ಮಾನಹಾನಿ ಮಾಡಿದ್ದಕ್ಕಾಗಿ ಯುಎಸ್ ಅಧ್ಯಕ್ಷರಾಗಿ ಚುನಾಯಿತರಾಗಿರುವ (The US president-elect) ಡೊನಾಲ್ಡ್ ಟ್ರಂಪ್ (Donald Trump) ಅವರಿಗೆ US $ 5 ಮಿಲಿಯನ್ ಪಾವತಿಸಲು ಆದೇಶಿಸಿದ ತೀರ್ಪುಗಾರರ ತೀರ್ಪನ್ನು ಫೆಡರಲ್ ಮೇಲ್ಮನವಿ ನ್ಯಾಯಾಲಯವು ದೃಢೀಕರಿಸಿದೆ.
1996 ರಲ್ಲಿ ಮ್ಯಾನ್‌ಹಟನ್ ಡಿಪಾರ್ಟ್‌ಮೆಂಟ್ ಸ್ಟೋರ್‌ನಲ್ಲಿ ಟ್ರಂಪ್, ಕ್ಯಾರೊಲ್‌ಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಕಳೆದ ವರ್ಷ ಒಂಬತ್ತು ದಿನಗಳ ಸಿವಿಲ್ ವಿಚಾರಣೆಯ ನಂತರ ನ್ಯೂಯಾರ್ಕ್ (New York) ತೀರ್ಪುಗಾರರು ಕಂಡುಕೊಂಡಿದ್ದಾರೆ.