ಕೊಪ್ಪಳ : ಯುಗಾದಿ ಹಬ್ಬದಂದು (Ugadi Festival) ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ. ಕೊಪ್ಪಳ, ವಿಜಯನಗರ, ಹಾವೇರಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ವರುಣ ತನ್ನ ಕೃಪೆ ತೋರಿಸಿದ್ದಾನೆ. ಇದರಿಂದ ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದ ಜನಕ್ಕೆ ಮಳೆರಾಯ ಆಗಮನದಿಂದ ಕೊಂಚ ತಂಪೆರೆದಿದ್ದಾನೆ. ಇದರಿಂದ ಜನ ಕುಣಿದು ಕುಪ್ಪಳಿಸಿದ್ದಾರೆ.
ಯುಗಾದಿ ದಿನವೇ ಇಂದು (ಏಪ್ರಿಲ್ 09) ಕರ್ನಾಟಕದ ಹಲವೆಡೆ ಮಳೆಯಾಗಿದೆ. ಇದೊಂದಿಗೆ ಬಿಸಿಲಿನ ತಾಪಕ್ಕೆ ಬೆಂಡಾದ ಜನರಿಗೆ ಮಳೆರಾಯ ಕೊಂಚ ತಂಪೆರೆದಿದ್ದಾನೆ. ಯುಗಾದಿ ಹಬ್ಬದ ದಿನವೇ ವಿವಿಧ ಜಿಲ್ಲೆಗಳಲ್ಲಿ ಮೊದಲ ಮಳೆ ಸುರಿದಿದೆ. ಕೊಪ್ಪಳ, ಹಾವೇರಿ ಮತ್ತು ಬಾಗಲಕೋಟೆಯಲ್ಲಿ ಮಳೆಯಾಗಿದ್ದು, , ಬರಗಾಲದಲ್ಲಿ ವರುಣನ ಆಗಮನದಿಂದ ಜನರಿಗೆ ಖುಷಿ ತಂದಿದೆ.