ಅಮೃತಸರ: ಡೊನಾಲ್ಡ್ ಟ್ರಂಪ್ ಅವರು ಆದೇಶದಂತೆ ಅಮೆರಿಕಾದಲ್ಲಿ ನೆಲಸಿದ್ದ ಅಕ್ರಮ ಭಾರತೀಯ ಮೂಲದ ನಿವಾಸಿಗಳ ಮೂರನೇ ತಂಡ 112 ಜನರ ಭಾರತೀಯನ್ನು ಹೊತ್ತಾ ಅಮರಿಕದ ಸೇನಾ ವಾಹನವು ಭಾನುವಾರ ರಾತ್ರಿ 10 ಗಂಟೆಗೆ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದೆ.
ಅಮೆರಿಕ ವಾಯುಪಡೆಯ ಸಿ-17 ಗ್ಲೋಬ್‌ಮಾಸ್ಟರ್ ವಿಮಾನದಲ್ಲಿ ಗಡೀಪಾರು ಮಾಡಲಾದ ಮೂರನೇ ತಂಡದಲ್ಲಿ ಪಂಜಾಬ್‌ನ 31 ಜನರು, ಹರಿಯಾಣದ 44 ಜನರು, ಗುಜರಾತ್‌ನ 33 ಜನರು, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ತಲಾ ಒಬ್ಬರು ಮತ್ತು ಉತ್ತರ ಪ್ರದೇಶದಿಂದ ಇಬ್ಬರು ಇದ್ದರು ಎಂದು ವರದಿಯಾಗಿದೆ.