ಮಾಲ್ಡೀವ್ಸ್ : ಭಾರತ ವಿರೋಧಿ ಹೇಳಿಕೆಗಳ ಕುರಿತು ನಡೆಯುತ್ತಿರುವ ವಿವಾದದ ಮಧ್ಯೆ ಮಾಲ್ಡೀವ್ಸ್‍ನಲ್ಲಿ ಯಾವುದೇ ಚಲನಚಿತ್ರಗಳನ್ನು ಚಿತ್ರೀಕರಿಸದಂತೆ ಅಖಿಲ ಭಾರತ ಸಿನಿ ವರ್ಕರ್ಸ್ ಅಸೋಸಿಯೇಷನ್ (ಎಐಸಿಡಬ್ಲ್ಯುಎ) ಭಾರತೀಯ ಚಲನಚಿತ್ರ ನಿರ್ಮಾಪಕರನ್ನು ಒತ್ತಾಯಿಸಿದೆ.
ಸಿನಿ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಶ್ಯಾಮಲಾಲ್ ಅವರು ವೀಡಿಯೊ ಸಂದೇಶದಲ್ಲಿ ಚಲನಚಿತ್ರೋದ್ಯಮವು ತಮ್ಮ ರಜಾದಿನಗಳಿಗಾಗಿ ದ್ವೀಪ ದೇಶಕ್ಕೆ ಹೋಗಬೇಡಿ ಮತ್ತು ಬದಲಿಗೆ ಭಾರತೀಯ ದ್ವೀಪಗಳನ್ನು ಪ್ರಚಾರ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.