ನವದೆಹಲಿ: ನೂತನವಾಗಿ ಪ್ರಾಣ ಪ್ರತಿಷ್ಠಾನ ವಾಗಿರುವ ಅಯೋಧ್ಯೆ ರಾಮಮಂದಿರಕ್ಕೆ ದೇಶಾದ್ಯಂತ ಭಕ್ತರ ದಂಡೇ ಹರಿದು ಬರುತ್ತಿದೆ. ಇದರಿಂದ ಅಯೋಧ್ಯೆ ಆಸುಪಾಸು ಜನಸಂದಣಿ ವಿಪರೀತವಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟದ ಸಚಿವರಿಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಜನಸಂದಣಿಯಿಂದಾಗಿ ಅಯೋಧ್ಯೆ ಭೇಟಿಯನ್ನು ಸದ್ಯಕ್ಕೆ ಮುಂದೂಡುವಂತೆ ಮನವಿ ಮಾಡಿದ್ದಾರೆ ಎಂದು ಸರ್ಕಾರಿ ಮೂಲಗಳು ಬಹಿರಂಗಪಡಿಸಿವೆ.
ಅಯೋಧ್ಯೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಿದೆ. ಅಂತಹ ಸಂದರ್ಭಗಳಲ್ಲಿ ವಿಐಪಿ ಪ್ರೋಟೋಕಾಲ್ಗಳು ಅವರಿಗೆ ಅನಾನುಕೂಲತೆಯನ್ನುಂಟುಮಾಡುತ್ತವೆ. ಹೀಗಾಗಿ ಮಾರ್ಚ್ನಲ್ಲಿ ಕೇಂದ್ರ ಸಚಿವರು ಬಾಲರಾಮನ ದರ್ಶನಕ್ಕೆ ತೆರಳಿದರೆ ಒಳಿತು. ಸದ್ಯಕ್ಕೆ ನೀವು ಅಲ್ಲಿಗೆ ಹೋಗಬೇಡಿ ಎಂದು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೋದಿ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.