ಭಾರತ : ದೇಶದ ಕೆಲ ಪ್ರದೇಶಗಳಲ್ಲಿ ಹಳೆಯ ವಿಗ್ರಹಗಳು ಸಿಗುತ್ತಿದ್ದು, ಅದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ (History) ಎನ್ನಬಹುದು.
ತೆಲಂಗಾಣದ ಪಾರಂಪರಿಕ ಇಲಾಖೆಯು ರಾಜಧಾನಿ ಹೈದರಾಬಾದ್‌ನಿಂದ 110 ಕಿಮೀ ದೂರದಲ್ಲಿರುವ ಬೌದ್ಧ ಪರಂಪರೆಯ ತಾಣವಾದ ಫಣಿಗಿರಿಯಲ್ಲಿ ದೇವಾಲಯ ಉತ್ಖನನ ಮಾಡುತ್ತಿದೆ. ಮಾರ್ಚ್ 2024ರ ಕೊನೆಯ ವಾರದಲ್ಲಿ ಪಾರಂಪರಿಕ ಇಲಾಖೆ ಉತ್ಖನನ ನಡೆಯುತ್ತಿರುವಾಗ ಭೂಮಿಯಲ್ಲಿ ಹುದುಗಿ ಹೋಗಿದ್ದ ವಸ್ತುಗಳು ಪತ್ತೆಯಾಗಿದೆ.
ಉತ್ಖನನ ನಿರ್ದೇಶಕ ಎನ್. ಸಾಗರ್ ಮತ್ತು ಸಹ ಅಧಿಕಾರಿ ಬಿ. ಮಲ್ಲು ಅವರ ನೇತೃತ್ವದಲ್ಲಿ ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದ ತಂಡಕ್ಕೆ ಮಾರ್ಚ್ 29ರಂದು ದೊಡ್ಡ ಮಣ್ಣಿನ ಮಡಕೆ ಸಿಕ್ಕಿದೆ. ಕೂಡಲೇ ಈ ಕುರಿತು ಮಾಹಿತಿ ಪಡೆದು ತೆಲಂಗಾಣ ಪುರಾತತ್ವ ಇಲಾಖೆಯ ಪ್ರಧಾನ ಕಾರ್ಯದರ್ಶಿ ಲತಾ ಶೈಲಜಾ ರಾಮಯ್ಯ ಮತ್ತು ಪರಂಪರೆ ಇಲಾಖೆ ನಿರ್ದೇಶಕಿ ಭಾರತಿ ಹೊಳ್ಳಿಕೇರಿ ಅವರು ಉತ್ಖನನ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಣ್ಣಿನ ಮಡಕೆಗಳಲ್ಲಿ ಸಾವಿರಾರು ನಾಣ್ಯಗಳು ಪತ್ತೆಯಾಗಿವೆ.