ನವದೆಹಲಿ: ಮಕ್ಕಳ ಹಾಲಿಗೆ ಸೇರಿಸುವ ಡ್ರಿಂಕ್ ಬೋರ್ನ್‌ವಿಟಾಗೆ (Bournvita) ಕೇಂದ್ರ ಸರ್ಕಾರ ದೊಡ್ಡ ಹೊಡೆತ ನೀಡಿದೆ.
ಬೋರ್ನ್‌ವಿಟಾ ಸೇರಿದಂತೆ ಹಲವು ಪಾನೀಯಗಳನ್ನು ಆರೋಗ್ಯಕರ ಡ್ರಿಂಕ್ಸ್ ವರ್ಗದಿಂದ ತೆಗೆದುಹಾಕುವಂತೆ ಕೇಂದ್ರ ಸರ್ಕಾರವು ಎಲ್ಲಾ ಇ-ಕಾಮರ್ಸ್ ಸೈಟ್‌ಗಳಿಗೆ ಸೂಚನೆ ನೀಡಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ನಡೆಸಿದ ವಿಚಾರಣೆಯ ನಂತರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಈ ಆದೇಶವನ್ನು ಹೊರಡಿಸಿದೆ.