ನವದೆಹಲಿ: ಪರಸ್ಪರ ಭ್ರಷ್ಟಾಚಾರವನ್ನು ಮುಚ್ಚಿ ಹಾಕಿಕೊಳ್ಳಲು ವಿಪಕ್ಷಗಳೆಲ್ಲಾ ಸೇರಿ INDI ಒಕ್ಕೂಟವನ್ನು ರಚಿಸಿಕೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಕಿಡಿಕಾರಿದರು. ನಮೋ ಅಪ್ಲಿಕೇಶನ್ ಮೂಲಕ ಕೇರಳ ಘಟಕದ ಬೂತ್ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಮೋದಿ, ಈ ಸಮಯದಲ್ಲಿ ವಿಪಕ್ಷಗಳ ವಿರುದ್ಧ ಹರಿಹಾಯ್ದರು.
INDI ಒಕ್ಕೂಟವನ್ನು ಟೀಕಿಸಿದ ಮೋದಿ, ಯಾವುದೇ ಪಕ್ಷದ ಹೆಸರನ್ನು ತೆಗೆದುಕೊಳ್ಳದೆ ಚಿನ್ನದ ಕಳ್ಳಸಾಗಣೆ ಮತ್ತು ಕರುವನ್ನೂರ್ ಸರ್ವೀಸ್ ಕೋ ಆಪರೇಟಿವ್ ಬ್ಯಾಂಕ್ ಹಗರಣದ ಬಗ್ಗೆ ಪ್ರಸ್ತಾಪಿಸಿದರು.