ದಕ್ಷಿಣ ಕನ್ನಡ: ಮಂಗಳೂರಿನ ಪಣಂಬೂರ್ ಬೀಚ್ ಬಳಿ. ವರ್ಷದ ಕೊನೆಯ ದಿನ ಸೂರ್ಯಾಸ್ತವನ್ನು ಕಾಣುತ್ತಾ ಜನ 2023ಕ್ಕೆ ವಿದಾಯ ಕೋರಿದ್ದಾರೆ.
ಕಡಲ ಅಲೆಯಲ್ಲಿ ಆಟ ಆಡುತ್ತಾ, ಸೂರ್ಯಾಸ್ತಮಾನ ಆಗಲು ಕಾದುಕುಳಿತಿದ್ದ ಜನರು, ಸೂರ್ಯ ಅಸ್ತಂಗತನಾಗುವ ಸುಳಿವು ನೀಡುತ್ತಿದ್ದಂತೆಯೇ ಸಂಭ್ರಮದಿಂದ ಕುಣಿದಾಡಿದ್ದಾರೆ.
ವರ್ಷಾಂತ್ಯದ ದಿನವಾದ ಆದಿತ್ಯವಾರ ಗರಿಷ್ಠ ಪ್ರಮಾಣದಲ್ಲಿ ಪ್ರವಾಸಿಗರು ಪಣಂಬೂರು ಬೀಚ್‍ನತ್ತ ಬಂದಿದ್ದರು. ಪಣಂಬೂರು ಬೀಚ್‍ನಲ್ಲಿ ಫ್ಲೋಟಿಂಗ್ ಬ್ರಿಡ್ಜ್ ಸೇರಿದಂತೆ ಇತರ ಜಲಕ್ರೀಡೆಗಳಲ್ಲಿ ಎಂಜಾಯ್ ಮಾಡಿ ವರ್ಷದ ಕೊನೆಯ ದಿನವನ್ನು ಸಂಭ್ರಮದಿಂದ ಕಳೆದಿದ್ದಾರೆ.