ನವದೆಹಲಿ: ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಕಮಲಾ ಹ್ಯಾರಿಸ್ (Kamala Harris) ಮತ್ತು ರಿಪಬ್ಲಿಕನ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ನಡುವೆ ನಡೆದ ಅಧ್ಯಕ್ಷೀಯ ಚುನಾವಣೆಯ ಪೈಪೋಟಿಯಲ್ಲಿ ಟ್ರಂಪ್ ಜಯಭೇರಿ ಸಾಧಿಸಿದ್ದಾರೆ.
ಪಾಕಿಸ್ತಾನದ ಹುಡುಗಿಯೊಬ್ಬಳು ತಾನು ಡೊನಾಲ್ಡ್ ಟ್ರಂಪ್ ಮಗಳು ಎಂದು ಹೇಳುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಾನು ಡೊನಾಲ್ಡ್ ಟ್ರಂಪ್ ಅವರ ನಿಜವಾದ ಮಗಳು, ಟ್ರಂಪ್ ನನ್ನ ತಂದೆ, ನನ್ನನ್ನು ಚೆನ್ನಾಗಿ ನೋಡಿಕೊಳ್ಳದ ಕಾರಣ ನನ್ನ ತಾಯಿ ಮತ್ತೆ ಪಾಕಿಸ್ತಾನಕ್ಕೆ ಕರೆದುಕೊಂಡು ಬಂದರು ಎಂದು ಮಾಧ್ಯಮದ ಮುಂದೆ ಮಾತನಾಡಿರುವ ದೃಶ್ಯ ಭಾರೀ ಸಂಚಲನ ಸೃಷ್ಟಿಸಿದೆ.