ಕೋಲಾರ: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಪಿಎಂ ವಿಶ್ವಕರ್ಮ ಯೋಜನೆಯಡಿ ಕುಶಲಕರ್ಮಿಗಳ ನೋಂದಣಿಯಲ್ಲಿ ಕೋಲಾರ ಜಿಲ್ಲೆ (Kolar News) ದೇಶದಲ್ಲೇ ಮುಂಚೂಣಿಯಲ್ಲಿದೆ. ಕೋಲಾರ ಜಿಲ್ಲೆಯಲ್ಲಿ ವಿಶ್ವಕರ್ಮ ಯೋಜನೆಯಡಿ (PM Vishwakarma Yojana) ತರಬೇತಿ ಪಡೆಯುತ್ತಿರುವ ಮಹಿಳೆಯರು, ಹೊಸ ಉತ್ಸಾಹದೊಂದಿದೆ, ವೃತ್ತಿ ಜೀವನ ಆರಂಭಿಸುವ ದಿಟ್ಟತನ ಪ್ರದರ್ಶಿಸಿದ್ದಾರೆ.
ಜಿಲ್ಲೆಯಲ್ಲಿ 70,000 ಕ್ಕೂ ಅಧಿಕ ಕುಶಲಕರ್ಮಿಗಳು ಈ ಯೋಜನೆಯಡಿ ತರಬೇತಿಗಾಗಿ ನೋಂದಣಿಯಾಗಿದ್ದು, ಇವರುಗಳಲ್ಲಿ ಮೊದಲ ಹಂತದಲ್ಲಿ 10,000 ಕುಶಲಕರ್ಮಿಗಳಿಗೆ ತರಬೇತಿ ನೀಡಲು ಕೇಂದ್ರ ಸರ್ಕಾರಕ್ಕೆ ಮೂರು ಹಂತಗಳಲ್ಲಿ ಶಿಫಾರಸ್ಸು ಮಾಡಲಾಗಿದೆ. ಅದರ ಮೊದಲ ಭಾಗವಾಗಿ ಕೋಲಾರದ ಕೃಷಿ ವಿಶ್ವವಿದ್ಯಾಲಯ ಹಾಗೂ ನಿರ್ಮಿತ ಕೇಂದ್ರದಲ್ಲಿ ವಿವಿಧ ಕುಶಲಕರ್ಮಿಗಳಿಗೆ ತರಬೇತುದಾರರಿಂದ ತರಬೇತಿಯನ್ನ ನೀಡಲಾಗ್ತಿದೆ.