ಬಾಗಲಕೋಟೆ : ಬಾಗಲಕೋಟೆಗೆ(Bagalkote) ಪ್ರಧಾನಿ ನರೇಂದ್ರ ಮೋದಿ(Narendra Modi) ಎಪ್ರಿಲ್ 28 ರಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಬರಲಿದ್ದಾರೆ. ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ, ವಿಜಯಪುರ ಅಭ್ಯರ್ಥಿ ರಮೇಶ್ ಜಿಗಜಿಣಗಿ ಪರ ಪ್ರಚಾರ ಮಾಡಲಿದ್ದಾರೆ.
ವೇದಿಕೆಯಲ್ಲಿ ಕೇಂದ್ರ ಸರಕಾರದ ಯೋಜನೆ ಸದುಪಯೋಗ ಪಡೆದುಕೊಂಡ ಐದು ಜನ ಫಲಾನುಭವಿಗಳಿಂದ ಮೋದಿಗೆ ಸನ್ಮಾನ ನಡೆಯಲಿದೆ. ಎಲ್ಇಡಿ ಮೂಲಕ ಮೋದಿ ಗ್ಯಾರಂಟಿಗಳು, ಕೇಂದ್ರದ ಯೋಜನೆಗಳ ಪ್ರದರ್ಶನ ನಡೆಯಲಿದ್ದು, ವೇದಿಕೆಯ ಬಲಭಾಗದಲ್ಲಿ ಹೆಲಿಪ್ಯಾಡ್ ಸಿದ್ದ ಮಾಡಲಾಗುತ್ತದೆ.
ಒಂದು ಗಂಟೆಗಳ ಕಾಲ ಸಮಾವೇಶದಲ್ಲಿ ಭಾಗವಹಿಸಿ ಕಾರವಾರ ಹಾಗೂ ಬೆಳಗಾವಿಗೆ ತೆರಳಲಿದ್ದಾರೆ. ದಾವಣಗೆರೆ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರವನ್ನು ಕೇಂದ್ರವಾಗಿ ಇಟ್ಟುಕೊಂಡು ಪ್ರಚಾರ ಸಮಾವೇಶ ನಡೆಸಲಿದ್ದಾರೆ.. ಅದ್ದರಿಂದ ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ವೇದಿಕೆ ಸಿದ್ದವಾಗುತ್ತಿದೆ.