ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಸ್ಟಾರ್ಮರ್ ಈ ಶೃಂಗಸಭೆ ಆಯೋಜಿಸಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಝೆಲೆನ್ಸ್ಕಿ ಭೇಟಿಯ ನಂತರ ಮುಂದಿನ ಹಾದಿಯ ಬಗ್ಗೆ ಚರ್ಚಿಸಲು ಈ ಶೃಂಗಸಭೆ ಏರ್ಪಡಿಸಲಾಗಿತ್ತು.
ಲಂಡನ್‌ನಲ್ಲಿ ನಡೆದ ಯುರೋಪಿಯನ್ ನಾಯಕರ ಪ್ರಮುಖ ಶೃಂಗಸಭೆಯಲ್ಲಿ ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ (Keir Starmer), ಉಕ್ರೇನ್‌ನಲ್ಲಿ (Ukraine) ಶಾಂತಿ ಸ್ಥಾಪಿಸಲು ಯುರೋಪ್ (Europe) ದೃಢ ಹೆಜ್ಜೆ ಇಡಬೇಕೆಂದು ಒತ್ತಾಯಿಸಿದರು. ಉಕ್ರೇನ್‌ಗೆ 5,000 ವಾಯು ರಕ್ಷಣಾ ಕ್ಷಿಪಣಿಗಳನ್ನು ಖರೀದಿಸಲು 1.6 ಬಿಲಿಯನ್ ಪೌಂಡ್‌ಗಳ (2 ಬಿಲಿಯನ್ ಡಾಲರ್) ಹೊಸ ಒಪ್ಪಂದವನ್ನು ರಫ್ತು ಹಣಕಾಸು ಮೂಲಕ ಘೋಷಿಸಿದರು.