ವಿಶ್ವದ ಅತ್ಯಂತ ಶ್ರೀಮಂತರಲ್ಲೊಬ್ಬರಾಗಿರುವ ಇಲಾನ್ ಮಸ್ಕ್ (elon musk) ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇದು ಅವರ ಮೊದಲ ಭಾರತ ಭೇಟಿಯೂ ಆಗಿದೆ.
ಮೊದಲ ಹಂತದ ಚುನಾವಣೆ ಮುಗಿದ ಮಾರನೆಯ ದಿನ ಮಸ್ಕ್ ಭಾರತಕ್ಕೆ ಬರಲಿದ್ದಾರೆ. ಏಪ್ರಿಲ್ 21 ಮತ್ತು 22ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ಸೇರಿದಂತೆ ಮಸ್ಕ್ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಭಾನುವಾರ ಮತ್ತು ಸೋಮವಾರ ಆಗಲಿರುವ ಅವರ ಭೇಟಿ ಬಹಳ ಮಹತ್ವದ ಬೆಳವಣಿಗೆ ಎಂದು ಪರಿಗಣಿಸಲಾಗಿದೆ.
ಈ ಭೇಟಿಯ ಸಮಯದಲ್ಲಿ, ಅವರು ಟೆಸ್ಲಾ ಮತ್ತು ಇತರ ವ್ಯವಹಾರಗಳ ಮೂಲಕ ಭಾರತದಲ್ಲಿ ಶತಕೋಟಿ ಡಾಲರ್ ಮೌಲ್ಯದ ಹೂಡಿಕೆಯನ್ನು ಘೋಷಿಸಬಹುದು