ಕ್ಯಾರಕಾಸ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೆನೆಜುವೆಲಾ (Venezuela) ಮೇಲೆ ಯುದ್ಧ ಘೋಷಿಸಿ, ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ವಶಕ್ಕೆ ಪಡೆದ ನಂತರ, ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಇನ್ನು ಮುಂದೆ ವೆನೆಜುವೆಲಾವನ್ನು ಅಮೆರಿಕ (America) ಆಳ್ವಿಕೆ ಮಾಡಲಿದೆ ಎಂದು ಘೋಷಿಸಿದ್ದಾರೆ.
ದೇಶವನ್ನು ನಡೆಸುವ ಅಧಿಕಾರವನ್ನು ತಕ್ಷಣವೇ ನಾವು ಯಾರಿಗಾದರೂ ಹಸ್ತಾಂತರಿಸಲು ಸಾಧ್ಯವಿಲ್ಲ. ಹಾಗಾಗಿ, ಸದ್ಯಕ್ಕೆ, ನಾವೇ ವೆನೆಜುವೆಲಾವನ್ನು ನಡೆಸುತ್ತೇವೆ” ಎಂದು ಘೋಷಿಸಿದರು. ಮುಂದುವರೆದು, ವೆನೆಜುವೆಲಾದ ತೈಲ ಉದ್ಯಮವನ್ನ ಅಮೆರಿಕ ನಡೆಸಲಿದೆ ಎಂದು ಘೋಷಿಸಿದ ಟ್ರಂಪ್, “ನಮ್ಮಲ್ಲಿ ವಿಶ್ವದ ಅತಿದೊಡ್ಡ ಮತ್ತು ಅತ್ಯುತ್ತಮ ತೈಲ ಕಂಪನಿಗಳಿವೆ, ಮತ್ತು ಈಗ ನಾವು ಅಲ್ಲಿ ನೇರವಾಗಿ ಇರುತ್ತೇವೆ” ಎಂದು ತಿಳಿಸಿದರು.
