ಲೋಕಸಭೆ ಚುನಾವಣೆ(Lok Sabha Election) ಗೆ ಮೊದಲ ಹಂತದ ಮತದಾನ ಏಪ್ರಿಲ್ 19 ರಂದು ನಡೆಯಿತು ಮತ್ತು 7 ನೇ ಮತ್ತು ಅಂತಿಮ ಹಂತದ ಮತದಾನ ಜೂನ್ 1 ರಂದು ನಡೆದಿತ್ತು.
ದೇಶದ 543 ಲೋಕಸಭಾ ಕ್ಷೇತ್ರಗಳ ಪೈಕಿ 542 ಕ್ಷೇತ್ರಗಳ ಮತ ಎಣಿಕೆ ಮಂಗಳವಾರ 8 ಗಂಟೆಯಿಂದ ಆರಂಭವಾಗಿತ್ತು. 543 ಸ್ಥಾನಗಳ ಪೈಕಿ ಉತ್ತರ ಪ್ರದೇಶದ 80 ಸ್ಥಾನಗಳು ಪ್ರಮುಖವಾಗಿವೆ. ಈ 80 ಸ್ಥಾನಗಳ ಪೈಕಿ ಒಂದು ಸ್ಥಾನ ವಾರಾಣಸಿಯಾಗಿದ್ದು, ಭಾರತೀಯ ಜನತಾ ಪಕ್ಷದ ನಾಯಕ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೇ ಅಭ್ಯರ್ಥಿಯಾಗಿದ್ದಾರೆ. ಸ್ಮೃತಿ ಇರಾನಿ ಸೋಲು ಅನುಭವಿಸಿದ್ದಾರೆ.

ನವದೆಹಲಿಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಐಎನ್ಡಿಐಎ ಮೈತ್ರಿಕೂಟ ನಾಯಕರ ಸಭೆ ನಡೆದಿದ್ದು, ಈ ಸಭೆಗೆ ಪ್ರಮುಖವಾಗಿ ಉದ್ಧವ್ ಠಾಕ್ರೆ, ಮಮತಾ ಬ್ಯಾನರ್ಜಿ ಗೈರಾಗಿದ್ದಾರೆ. ಉದ್ಧವ್ ಠಾಕ್ರೆ ಅವರು ತಮ್ಮ ಬದಲಿಗೆ ಸಂಜಯ್ ರಾವತ್ರನ್ನು ಕಳುಹಿಸಿದ್ದು, ಅಗತ್ಯವಿದ್ದರೆ ಮಾತ್ರ ದೆಹಲಿಗೆ ಬರುವುದಾಗಿ ಹೇಳಿದ್ದಾರಂತೆ. ಇನ್ನು ಮಮತಾ ಬ್ಯಾನರ್ಜಿ ತಮ್ಮ ಬದಲು ಅಭಿಷೇಕ್ರನ್ನ ಕಳಿಸಿದ್ದಾರೆ.
ಸಂಜೆ ನವದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಎನ್ಡಿಎ ಮೈತ್ರಿಕೂಟ ನಾಯಕರ ಸಭೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಎನ್ಡಿಎ ಮೈತ್ರಿಕೂಟದ ನಾಯಕರು , ಅಮಿತ್ ಶಾ ಅವರು ಈಗಾಗಲೇ ಮೋದಿ ನಿವಾಸ ತಲುಪಿದ್ದಾರೆ.