ಉತ್ತರ ಪ್ರದೇಶ : ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೆ ಹಾಜರಾಗಲು ಉತ್ತರಪ್ರದೇಶದ ಸುಲ್ತಾನ್‌ಪುರಕ್ಕೆ ತೆರಳಿದ್ದ ರಾಹುಲ್ ಗಾಂಧಿ, ಮಾರ್ಗ ಮಧ್ಯೆ ಚಮ್ಮಾರ ರಾಮ್ ಚೇತ್ಅಂ ಗಡಿಗೂ ಭೇಟಿ ನೀಡಿದ್ದಾಗ ಹೊಲಿದಿದ್ದ ಚಪ್ಪಲಿಗಳನ್ನು ಕೊಳ್ಳಲು 10 ಲಕ್ಷ ರೂ. ಕೊಟ್ಟು ಖರೀದಿಸಲು ಜನರು ಮುಂದೆ ಬಂದಿದ್ದಾರೆ.
ರಾಹುಲ್ ಗಾಂಧಿ ಹೊಲಿದಿರುವ ಚಪ್ಪಲಿಗಳು ನನ್ನ ಅದೃಷ್ಟದ ಪಾದರಕ್ಷೆಗಳೆಂದು ಭಾವಿಸಿದ್ದೇನೆ. ಅವುಗಳನ್ನು ಗಾಜಿನ ಪೆಟ್ಟಿಗೆಯಲ್ಲಿ ಜೋಪಾನವಾಗಿಡುತ್ತೇನೆ ಎಂದು ರಾಮ್ ಚೇತ್ ಹೇಳಿದ್ದಾರ.
ರಾಹುಲ್ ಚಮ್ಮಾರ ರಾಮ್ ಚೇತ್ ಗೆ ಸಹಾಯವಾಗಲೆಂದು ಆಧುನಿಕ ಹೊಲಿಗೆ ಯಂತ್ರವನ್ನು ತನ್ನ ತಂಡದ ಮೂಲಕ ಕಳುಹಿಸಿಕೊಟ್ಟಿದ್ದರು ಇದು ರಾಮ್ ಚೇತ್ ಅವರನ್ನು ಮಂತ್ರ ಮುಗ್ದಗೊಳಿಸಿತು.
ರಾಹುಲ್ ಗಾಂಧಿ ಹೊಲಿದಿರುವ ಚಪ್ಪಲಿಗಳನ್ನು ಖರೀದಿಸಲು ಬಹಳಷ್ಟು ಜನರು ಆಸಕ್ತಿ ತೋರುತ್ತಿದ್ದಾರೆ. ಕರೆ ಮಾಡಿದ್ದವರೊಬ್ಬರು ಮೊದಲು 5 ಲಕ್ಚ ರೂ ಕೊಡುತ್ತೇನೆ ಎಂದಿದ್ದಾರೆ.