ಕೋಲ್ಕತ್ತಾ: ಬೆಂಗಳೂರನ್ನ ಬೆಚ್ಚಿ ಬೀಳಿಸಿದ್ದ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಶುಕ್ರವಾರ ಎನ್ಐಎ ಅಧಿಕಾರಿಗಳು ಇಬ್ಬರು ಮಾಸ್ಟರ್ ಮೈಂಡ್ಗಳನ್ನ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಾದ ಮುಸಾವಿರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ತಾಹಾನನ್ನು ವೈದ್ಯಕೀಯ ಪರೀಕ್ಷೆ ಮಾಡಿಸಿ ಅವರನ್ನು ಕೊಲ್ಕತ್ತಾದ ಎನ್ ಐಎ ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ. ಇಬ್ಬರನ್ನು ಟ್ರಾನ್ಸಿಟ್ ರಿಮಾಂಡ್ಗಾಗಿ ಮನವಿ ಮಾಡಿತ್ತು. ಇದೀಗ ನ್ಯಾಯಾಲಯ 3 ದಿನಗಳ ಟ್ರಾನ್ಸಿಟ್ ವಾರಂಟ್ಗೆ ಅನುಮತಿ ನೀಡಿದೆ ಎಂದು ತಿಳಿದುಬಂದಿದೆ. ಕೋರ್ಟ್ ನಿಂದ ವಶಕ್ಕೆ ಪಡೆದು ಆರೋಪಿಗಳನ್ನು ಎನ್ಐಎ ತಂಡ ಬೆಂಗಳೂರಿಗೆ ಕರೆತರಲಿದೆ ಎನ್ನಲಾಗಿದೆ.
ರಾಮೇಶ್ವರಂ ಕೆಫೆ ಸ್ಫೋಟದ ನಂತರ ಪರಾರಿಯಾಗಿದ್ದ ಶಂಕಿತರು ಪಶ್ಚಿಮ ಬಂಗಾಳದ ದಿಘಾ ಬಳಿ ಬಂಧಿಸಲಾಗಿದೆ ಎಂದು ಎನ್ಐಎ ತಿಳಿಸಿದೆ. ಈ ದಾಳಿ ವೇಳೆ ಕೆಲವು ಎಲೆಕ್ಟ್ರಿಕ್ ಡಿವೈಸ್ಗಳು ಪತ್ತೆಯಾಗಿದೆ. ಬಾಂಬ್ ಸ್ಪೋಟಕ್ಕೆ ಒಂದು ಗಂಟೆಯ ಅವಧಿ ಫಿಕ್ಸ್ ಮಾಡಿ ಸ್ಪೋಟ ಮಾಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಮುಜಾವೀರ್ 2019 ರಿಂದ ನಾಪತ್ತೆಯಾಗಿದ್ದಾನೆಂಬ ಎಲ್ಲಾ ಅಂಶಗಳನ್ನು ಉಲ್ಲೇಖಿಸಿ ಎನ್ಐಎ ಮೂರು ದಿನಗಳ ಟ್ರಾನ್ಸಿಸ್ಟ್ ವಾರೆಂಟ್ ಅನುಮತಿ ಕೇಳಿತ್ತು. ಇದೀಗ ಕೋರ್ಟ್ 3 ದಿನಗಳ ಟ್ರಾನ್ಸಿಟ್ ವಾರಂಟ್ಗೆ ಅನುಮತಿ ನೀಡಿದೆ.