ಬೆಂಗಳೂರು : ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಜೈಲು ಸೇರಿದ್ದ ಜೆಡಿಎಸ್ ಶಾಸಕ ಎಚ್.ಡಿ ರೇವಣ್ಣ ಅವರಿಗೆ ಜಾಮೀನು ಸಿಕ್ಕಿದ್ದು, ಮೇ 14ಕ್ಕೆ ಬಿಡುಗಡೆ ಆಗಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆದ ರೇವಣ್ಣ ಅವರು ಮೊದಲಿಗೆ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದರು.
ರೇವಣ್ಣ, ದೇವೇಗೌಡ್ರ ನಿವಾಸದಿಂದ ನೇರವಾಗಿ ಬಸವನಗುಡಿಯ ಕಾರಂಜಿ ಆಂಜನೇಯ ಸ್ವಾಮಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಪ್ರತಿಕ್ರಿಯೆ ನೀಡಿದ ರೇವಣ್ಣ ಅವರು ನಾನು ಹೆಚ್ಚಿಗೆ ಏನು ಹೇಳಲ್ಲ. ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇದ್ದು, ನ್ಯಾಯಾಂಗವನ್ನ ನಾನು ಗೌರವಿಸುತ್ತೇನೆ. ನನಗೆ ದೇವರ ಮೇಲೆಯೂ ನಂಬಿಕೆ ಇದೆ. ಈ ಆಪಾದನೆಯಿಂದ ಹೊರ ಬರುತ್ತೇನೆ. 11 ದಿನದ ನ್ಯಾಯಾಂಗದ ಆದೇಶ ಪಾಲಿಸಿದ್ದೇನೆ. ಉಳಿದ ಯಾವುದಕ್ಕೂ ರಿಯಾಕ್ಟ್ ಮಾಡಲ್ಲ ಎಂದಿದ್ದಾರೆ.