ದಕ್ಷಿಣ ಕನ್ನಡ: ಮಂಗಳೂರು ನಗರದೊಳಗಡೆ ನಡೆಯುತ್ತಿರುವ ಏಕೈಕ ಕಂಬಳ ಮಂಗಳೂರು ಕಂಬಳ. ಆರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಈ ಬಾರಿ ಏಳನೇ ವರ್ಷದ ಕಂಬಳ ರಾಮ-ಲಕ್ಷ್ಮಣ ಜೋಡುಕರೆ ಕಂಬಳ ಸಂಭ್ರಮದಿಂದ ನಡೆದಿದೆ.
ಸುಮಾರು 150ಕ್ಕಿಂತಲೂ ಅಧಿಕ ಜತೆ ಕೋಣಗಳು ನೇಗಿಲು ಹಿರಿಯ ವಿಭಾಗದಲ್ಲಿಯೇ ಭಾಗವಹಿಸಿವೆ.
ಕಂಬಳದ ಕರೆಯಲ್ಲಿ ಮಿಂಚಿನ ಓಟದಲ್ಲಿ ಓಡುತ್ತಿರುವ ಕೋಣಗಳು. ಅದೇ ವೇಗದಲ್ಲಿ ಓಡುವ ಕಂಬಳ ಓಟಗಾರ. ಯಾವ ಕೋಣಗಳು ಮೊದಲು ಗುರಿಮುಟ್ಟುತ್ತದೆ ಎಂಬ ಕುತೂಹಲದಿಂದ ನೆಟ್ಟ ದೃಷ್ಟಿಯಿಂದ ನೋಡುವ ಪ್ರೇಕ್ಷಕರು. ಇದೆಲ್ಲಾ ದೃಶ್ಯಗಳು ಕಂಡು ಬಂದಿರೋದು ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ನಡೆದ ಮಂಗಳೂರು ಕಂಬಳದಲ್ಲಿ.