ಮುಂಬಯಿ : ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವೈವಾಹಿಕ ಜೀವನದಲ್ಲಿ ಎದುರಾಗಿರುವ ಸಮಸ್ಯೆಗಳೇ ಈಗ ಬಾಲಿವುಡ್ ನಲ್ಲಿ ಚರ್ಚೆಯ ವಿಷಯ.
ಇವರಿಬ್ಬರ ವಿಚ್ಛೇದನ ಸುದ್ದಿ ಹಬ್ಬುತ್ತಿದ್ದಂತೆಯೇ ಇವರ ಪ್ರತಿಯೊಂದು ನಡೆಯ ಬಗ್ಗೆ ಪ್ರಶ್ನೆ ಏಳಲು ಆರಂಭವಾಯಿತು. ಈ ನಡುವೆ ಐಶ್ವರ್ಯಾ ಈಗ ತಮ್ಮ ಅತ್ತೆ ಮಾವನ ಜೊತೆಯಲ್ಲಿ ವಾಸಿಸುತ್ತಿಲ್ಲ ಅವರು ಜಲ್ಸಾ ತೊರೆದು ಪ್ರತ್ಯೇಕವಾಗಿ ಬದುಕುತ್ತಿದ್ದಾರೆ ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಅನೇಕ ಕಾರ್ಯಕ್ರಮಗಳಲ್ಲಿ ಇಬ್ಬರೂ ಜೊತೆಯಲ್ಲಿ ಭಾಗವಹಿಸದೆ ಇರುವುದು ಎಲ್ಲಾ ಊಹಾ ಪೋಹಗಳಿಗೆ ಕಾರಣವಾಗಿತ್ತು
ಐಶ್ವರ್ಯಾ ತನ್ನ ಅತ್ತೆಯ ಮನೆಯಿಂದ ಹೊರ ನಡೆದಿದ್ದಾರೆ ಎನ್ನುವ ಸುದ್ದಿ ಹಬ್ಬುತ್ತಿದ್ದಂತೆಯೇ ನೆಟ್ಟಿಗರು ಅಭಿಷೇಕ್ ಬಚ್ಚ ನ್ ಅವರ ಹಳೆಯ ವಿಡಿಯೋವೊಂದನ್ನು ವೈರಲ್ ಮಾಡುತ್ತಿದ್ದಾರೆ. ಅಭಿಷೇಕ್ ಬಚ್ಚನ್ ಅವರು ತಮ್ಮ ಪೋಷಕರಿಂದ ಪ್ರತ್ಯೇಕವಾಗಿ ವಾಸಿಸುವ ಬಗ್ಗೆಆ ಹಳೆಯ ವೀಡಿಯೊದಲ್ಲಿಯೇ ಬಹಿರಂಗವಾಗಿ ಮಾತನಾಡಿದ್ದಾರೆ.