ನವದೆಹಲಿ: ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ (G7 Summit 2024) ಭಾಗವಹಿಸಲು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಭಾರತಕ್ಕೂ ಆಹ್ವಾನ ನೀಡಿದ್ದರು.
ಇಟಲಿಯ ಶೃಂಗಸಭೆಯಲ್ಲಿ ಫ್ರಾನ್ಸ್, ಕೆನಡಾ, ಬ್ರಿಟನ್, ಉಕ್ರೇನ್, ಅಮೆರಿಕಾ, ಇಟಲಿ ಮುಂತಾದ ದೇಶಗಳ ನಾಯಕರ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದಾರೆ.
ಜಾಗತಿಕ ಸಮುದಾಯಕ್ಕೆ ಪ್ರಯೋಜನಕಾರಿ ಮತ್ತು ಭವಿಷ್ಯದ ಪೀಳಿಗೆಗೆ ಉತ್ತಮ ಜಗತ್ತನ್ನು ಸೃಷ್ಟಿಸುವ ಪರಿಣಾಮಕಾರಿ ಪರಿಹಾರಗಳನ್ನು ರಚಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಆತ್ಮೀಯ ಆತಿಥ್ಯಕ್ಕಾಗಿ ನಾನು ಇಟಲಿಯ ಜನರಿಗೆ ಮತ್ತು ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.