ಮುಂಬೈ : ಕರಣ್ ಜೋಹರ್ ಅವರಿಗೆ ಈಗ 52 ವರ್ಷ. ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗದಿರಲು ನಿರ್ಧರಿಸಿದ್ರು. ಕರಣ್ ಜೋಹರ್ ಮದುವೆಯಾಗದೆ ಇಬ್ಬರು ಅವಳಿ ಮಕ್ಕಳ ತಂದೆಯಾಗಿದ್ದಾರೆ. ಅವರ ಮಕ್ಕಳು ಈಗ ನಮ್ಮ ತಾಯಿ ಯಾರು ಎಂದು ಕರಣ್ಗೆ ಕೇಳಿದ್ದಾರೆ.
ಮದುವೆಯಾಗದಿದ್ರೂ ಮಕ್ಕಳನ್ನು ಸಾಕುವ ಆಸೆ ಕರಣ್ ಜೋಹರ್ ಅವರಿಗಿದೆ. ತನ್ನದೇ ಸ್ವಂತ ಮಕ್ಕಳನ್ನು ಬಯಸಿದ್ದ, ಕರಣ್ ಬಾಡಿಗೆ ತಾಯ್ತನದ ಮೂಲಕ ತಂದೆಯಾಗಲು ನಿರ್ಧರಿಸಿದ್ರು. 2017 ರಲ್ಲಿ ಕರಣ್ ಬಾಡಿಗೆ ತಾಯ್ತನದ ಮೂಲಕ ಇಬ್ಬರು ಅವಳಿ ಮಕ್ಕಳನ್ನು ಹೊಂದಿದ್ದರು.
ರಣ್ ಅವರಿಗೆ ತಾಯಿಯು ಬೆಂಬಲವಾಗಿ ನಿಂತ್ರು ಮೊಮ್ಮಕ್ಕಳ ಲಾಲನೆ-ಪಾಲನೆ ಮಾಡಿದ್ರು. ಕರಣ್ ಇಬ್ಬರು ಮಕ್ಕಳಿಗೂ ಅವರೇ ತಂದೆ ಮತ್ತು ತಾಯಿಯಾಗಿ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಮಕ್ಕಳಂದ್ರೆ ಕರಣ್ ಜೋಹರ್ ಅವರಿಗೆ ಬಲು ಪ್ರೀತಿ.