ಮುಂಬೈ: ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಹಾಗೂ ನೀತಾ ಅಂಬಾನಿ (Nita Ambani) ಮನೆಯಲ್ಲಿ ವಿವಾಹ (wedding) ಸಂಭ್ರಮ ಮುಂದುವರೆದಿದೆ.
ಜುಲೈ 12ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಮುಂಬೈನ (Mumbai) ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ (Jio World Convention Centre) ಅದ್ಧೂರಿಯಾಗಿ ನಡೆಯಲಿದೆ. ಈ ವಿವಾಹಕ್ಕೂ ಮುನ್ನ ಬಡ ವಧು ವರರ ವಿವಾಹ ಮಾಡಿಸೋದಕ್ಕೆ ನೀತಾ ಅಂಬಾನಿ ಹಾಗೂ ಮುಕೇಶ್ ಅಂಬಾನಿ ಮುಂದಾಗಿದ್ದಾರೆ.
ಖ್ಯಾತ ಕೈಗಾರಿಕೋದ್ಯಮಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಡೆಟ್‌ನ (RIL) ಅಧ್ಯಕ್ಷ ಹಾಗೂ ಎಂಡಿ ಮುಕೇಶ್ ಅಂಬಾನಿ, ನೀತಾ ಅಂಬಾನಿ ಹಾಗೂ ಖ್ಯಾತ ಉದ್ಯಮಿ ವೀರೇನ್ ಮರ್ಚೆಂಟ್ (Viren Merchant) ಹಾಗೂ ಶೈಲಾ ಮರ್ಚೆಂಚ್ (Shaila Merchant) ಕುಟುಂಬದಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ.