ನವದೆಹಲಿ: ನಾಗರಿಕ ಸೇವಾ ಪರೀಕ್ಷೆಯಲ್ಲಿ (UPSC) ಆಯ್ಕೆಯಾಗುವುದು ಲಕ್ಷಾಂತರ ಜನರ ಕನಸು. ಆದರೆ ಇದನ್ನು ಸಾಧಿಸುವುದು ಅಷ್ಟು ಸುಲಭವಲ್ಲ. ಲಕ್ಷಗಟ್ಟಲೆ ಜನ ಪ್ರಿಲಿಮ್ಸ್ (Prelims) ಬರೆದರೆ ನೂರಾರು ಮಂದಿ ಮಾತ್ರ ಸಿವಿಲ್ ಸೇವೆಗೆ (Civil Service) ಆಯ್ಕೆಯಾಗುತ್ತಾರೆ.
ಯುಪಿಯ ಆದಿತ್ಯ ಶ್ರೀವಾಸ್ತವ (Adithya Srivastav) ಪ್ರಥಮ ರ್ಯಾಂಕ್ ಪಡೆದರೆ, ಒಡಿಶಾದ ಅನಿಮೇಶ್ ಪ್ರಧಾನ್ ದ್ವಿತೀಯ ಹಾಗೂ ಪಾಲಮೂರಿನ ಡೋಣೂರು ಅನನ್ಯಾ ರೆಡ್ಡಿ ದೇಶದಲ್ಲೇ ತೃತೀಯ ರ್ಯಾಂಕ್ ಪಡೆದು ಸುದ್ದಿಯಾಗಿದ್ದರು. ಇದೀಗ ಟಾಪರ್ಗಳು ಪಡೆದಿರುವ ಈ ಅಂಕಗಳತ್ತಾ ಕಣ್ಣಾಡಿಸಿದರೆ ಸಿವಿಲ್ಸ್ ಪರೀಕ್ಷೆ ಎಷ್ಟು ಕಠಿಣ ಎಂಬುದು ಅರ್ಥವಾಗುತ್ತದೆ.
ಶ್ತೀವಾಸ್ತವ್ ನಂತರ ಎರಡನೇ ರ್ಯಾಂಕ್ ಪಡೆದ ಒಡಿಶಾದ ಅನಿಮೇಶ್ ಪ್ರಧಾನ್ 1067 ಅಂಕ (892, 175) ಗಳಿಸಿದ್ದಾರೆ. ಇನ್ನು ಮೊದಲ ಪ್ರಯತ್ನದಲ್ಲಿ ತೃತೀಯ ಸ್ಥಾನ ಪಡೆದ ತೆಲಂಗಾಣದ ಡೋಣೂರು ಅನನ್ಯ ರೆಡ್ಡಿ (ಇಡಬ್ಲ್ಯುಎಸ್ ಕೋಟಾ) 1065 ಅಂಕ (875, 190) ಪಡೆದಿದ್ದಾರೆ. ಪಿ.ಕೆ.ಸಿದ್ಧಾರ್ಥ್ ರಾಮ್ಕುಮಾರ್ 1059 ಅಂಕ (874, 185), ಹಾನಿ 1049 ಅಂಕ (856, 193), ಸೃಷ್ಟಿ ದಾಬಸ್ 1048 ಅಂಕ (862, 186), ಅನ್ಮೋಲ್ ರಾಥೋಡ್ 1045 (839, 206) ಮತ್ತು ಆಸಿಸ್ ಕುಮಾರ್ 1045 (866, 179), ನೌಶೀನ್ 1045 (863, 182) ಮತ್ತು ಐಶ್ವರ್ಯಂ ಪ್ರಜಾಪತಿ (ಒಬಿಸಿ ಕೋಟಾ) 1044 (890, 154) ಅಂಕಗಳನ್ನು ಪಡೆದು ಟಾಪ್ 10 ರ್ಯಾಂಕ್ ಪಡೆದುಕೊಂಡಿದ್ದಾರೆ.