ಹೊಸದಿಲ್ಲಿ : ಎಸ್‌ಸಿ, ಎಸ್‌ಟಿ ಸಮುದಾಯಗಳಲ್ಲಿ ಅತ್ಯಂತ ದುರ್ಬಲಪಂಗಡಗಳ ಮೀಸಲಾತಿಯಲ್ಲಿ ಆದ್ಯತೆ ನೀಡಬೇಕೆಂದು ನ್ಯಾಯಾಲಯವು ತೀರ್ಪಿನಲ್ಲಿ ಪ್ರತಿಪಾದಿಸಿತ್ತು. ಸುಪ್ರೀಂಕೋರ್ಟ್ ನೀಡಿದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಒಳಮೀಸಲಾತಿಗೆ ಸಂಬಂಧಿಸಿ ತೀರ್ಪನ್ನು ಪ್ರತಿಭಟಿಸಿ ‘ಮೀಸಲಾತಿ ಬಚಾವೋ ’ ಸಮಿತಿಯು ಬುಧವಾರ ಭಾರತ ಬಂದ್ ಗೆ ಕರೆ ನೀಡಿದೆ.
ಬಂದ್ ವೇಳೆ ಯಾವುದೇ ಉದ್ವಿಗ್ನ ಪರಿಸ್ಥಿತಿ ಉದ್ವೇಗ ಉಂಟಾಗದಂತೆ ರಾಜಸ್ಥಾನದ ಎಲ್ಲಾ ಜಿಲ್ಲೆಗಳಲ್ಲಿ ಪೊಲೀಸ್ ನಿಯೋಜನೆಯನ್ನು ಹೆಚ್ಚಿಸಲು ರಾಜ್ಯ ಸರಕಾರ ಆದೇಶ ನೀಡಿದೆ.
ಬಂದ್ ವೇಳೆ ಅಂಗಡಿ, ಮುಂಗಟ್ಟೆಗಳನ್ನು ಮುಚ್ಚುಗಡೆಗೊಳಿಸುವಂತೆಯೂ ಬಂದ್ ಸಂಘಟಕರು ಕರೆ ನೀಡಿದ್ದಾರೆ.