ಚೆನ್ನೈ : ವಯಾನಾಡ್ನಲ್ಲಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೇರಳಕ್ಕೆ 5 ಕೋಟಿ ರೂ. ನೆರವು ನೀಡಿದ್ದಾರೆ.
ಚೆನ್ನೈ ಮುಖ್ಯ ಮಂತ್ರಿ ಸ್ಟಾಲಿನ್ ವಯನಾಡ್ನಲ್ಲಿ ಸಂಭವಿಸಿದ ಭೂಕುಸಿತದಿಂದ ಸಂತ್ರಸ್ತರಾದ ಜನರಿಗೆ ತಮಿಳುನಾಡು ಸರಕಾರ ಬೆಂಬಲ ನೀಡುವುದು, ಪರಿಹಾರ ಹಾಗೂ ಪುನರ್ವಸತಿಗೆ 5 ಕೋಟಿ ರೂ. ಸಹಾಯ ಧನ, ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವು ನೀಡಲು ಐಎಎಸ್ ಅಧಿಕಾರಿಗಳ ನೇತೃತ್ವದ ಎರಡು ತಂಡದ ನಿಯೋಯಾಜನೆ, ವೈದ್ಯಕೀಯ ನೆರವು , ಅಗ್ನಿ ಶಾಮಕದ ದಳ, ರಕ್ಷಣಾ ಸೇವೆಗಳ ತಂಡವನ್ನು ಕೂಡ ಕಳುಹಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ