ಉಳ್ಳಾಲ : ಸಯ್ಯದ್ ಆಲವಿ ತಂಙಳ್ (79) ಅವರು ಕಿನ್ಯ ಸುನ್ನೀ ಸೆಂಟರ್ ಎಸ್ ವೈ ಎಸ್ ಕಚೇರಿಯಲ್ಲಿ ನಡೆದ ಕೂರ ತಂಙಳ್ ಅನುಸ್ಮರಣೆ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದು ಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟರು.
ಅವರು ಧಾರ್ಮಿಕ ಗುರುಗಳಾಗಿ ಹೊಸನಗರ, ಬಾಳೆಹೊನ್ನೂರು, ಚಿಕ್ಕಮಗಳೂರು ಖತೀಬ್ ರಾಗಿ ಸೇವೆ ಸಲ್ಲಿಸಿದ್ದರು. ಕಿನ್ಯ ಬುಖಾರಿ ಜುಮಾ ಮಸೀದಿಯ ಗೌರವ ಅಧ್ಯಕ್ಷರಾಗಿದ್ದರು