ಈ ದಿನ ಪರಮಪೂಜ್ಯ ಸ್ವಾಮೀಜಿಗಳು ಶಿವಮೊಗ್ಗ ನಗರದ ವಿನೋಬಾ ನಗರದಲ್ಲಿರುವ ಒಂದು ವಾರದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ವಾಲ್ಮೀಕಿ ನಿಗಮದ ಅದೀಕ್ಷಕರಾಗಿರುವ ಹಾಗೂ ಹಿಂದುಳಿದ ಸಮುದಾಯದ ಕುಲಬಾಂಧವರಾದ ಶ್ರೀ ದಿವಂಗತ ಚಂದ್ರಶೇಖರ್ ಅವರ ಮನೆಗೆ ಭೇಟಿ ನೀಡಿ ಅವರ ಧರ್ಮಪತ್ನಿ ಹಾಗೂ ಮಕ್ಕಳಿಗೆ ಸಾಂತ್ವನವನ್ನು ಹೇಳಿದರು.
ಮಾಧ್ಯಮದೊಂದರಿಗೆ ಮಾತನಾಡಿ ಈ ಕುಟುಂಬಕ್ಕೆ ಒಂದು ಕೋಟಿ ರೂಪಯಿ ಹಣವನ್ನು ಬಿಡುಗಡೆ ಮಾಡಬೇಕು ಆ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿಯನ್ನು ಕೊಡಬೇಕಾಗಿ ಗುರುಗಳು ಆಗ್ರಹಿಸಿದರು ಹಾಗೂ ಸಚಿವ ನಾಗೇಂದ್ರ ಅವರನ್ನು ಈ ಕೂಡಲೇ ಸಂಪುಟ ಸಚಿವ ಸ್ಥಾನದಿಂದ ವಜಗೊಳಿಸಬೇಕು ಮತ್ತು ಸಿಬಿಐ ತನಿಖೆ ನಡೆಸಬೇಕು ಉಳಿದ ತಪ್ಪಿದಸ್ಥರಾದ ಅಧಿಕಾರಿಗಳನ್ನು ಬಂಧಿಸಬೇಕಾಗಿ ಶ್ರೀಗಳು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀಯುತ ಹೆಚ್ ವೆಂಕಟೇಶ್ ಮೂರ್ತಿಯವರು ದಾವಣಗೆರೆ ಜಿಲ್ಲಾ ಅಧ್ಯಕ್ಷರಾದ ಶ್ರೀಯುತ ಆರ್ ಪ್ರತಾಪ್ ರವರು ಶಿವಮೊಗ್ಗಜಿಲ್ಲಾ ಉಪಾಧ್ಯಕ್ಷರಾದ ಶ್ರೀಯುತ ವಾಸಪ್ಪ ನವರು ರಾಜ್ಯ ಮಹಿಳಾ ಉಪಾಧ್ಯಕ್ಷರಾಗಿರುವ ಶ್ರೀಮತಿ ಯಶೋದಮ್ಮ ದೊಡ್ಡಘಟ್ಟ ರವರು ಸಮುದಾಯದ ಯುವ ಮುಖಂಡರು ಹಾಗೂ ಚಿತ್ರ ನಟರಾದ ಶ್ರೀಯುತ ನೂತನ್ ಕಣ್ಣಯ್ಯ ರವರು ಶ್ರೀಯುತ ಶಿವಾಜಿ ಸಣ್ಣ ಬೊಮ್ಮಜಿಯವರು ಶ್ರೀಗಳ ಜೊತೆ ಉಪಸ್ಥಿತರಿದ್ದರು.
ನೂತನ ಜಿಲ್ಲಾಧ್ಯಕ್ಷರಾದ ಶ್ರೀಯುತ ಹೆಚ್. ವೆಂಕಟೇಶ್ ಮೂರ್ತಿ ಅವರಿಗೆ ಉಳಿದ ಎಲ್ಲಾ ತಾಲೂಕುಗಳಿಗೂ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಜಿಲ್ಲೆಯ ದಾಧಿಕಾರಿಗಳನ್ನು ಮತ್ತು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಸಂಘಟನೆಯನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಬಲಪಡಿಸಲು ಶ್ರೀ ಗಳು ಆದೇಶ ನೀಡಿದರು.