ಶ್ರೀಹರಿಕೋಟ : ಇಸ್ರೋ ವಿಶೇಷವಾಗಿ ವರ್ಕ್‌ಹಾರ್ಸ್ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (Workhorse Polar Satellite Launch Vehicle) ರಾಕೆಟ್ ಬಳಸಿ ಸುಮಾರು 220 ಕೆಜಿ ತೂಕದ ಬಾಹ್ಯಾಕಾಶ ನೌಕೆಗಳನ್ನು ಉಡಾವಣೆ ಮಾಡಿದೆ.
ಬಾಹ್ಯಾಕಾಶದಲ್ಲಿ ಜೋಡಣೆಯಾಗುವ ಎರಡು ಉಪಗ್ರಹಗಳ ನಡುವೆ ವಿದ್ಯುತ್ ಶಕ್ತಿಯ ಹಂಚಿಕೆ ನಡೆಸುವುದು ಈ ಯೋಜನೆಯ ಮುಖ್ಯ ಗುರಿಗಳಲ್ಲಿ ಒಂದಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organization) ತನ್ನ ಮಹತ್ವಾಕಾಂಕ್ಷೆಯ ಮಿಷನ್ PSLV C-60 ಅನ್ನು ಇಂದು (ಸೋಮವಾರ) ರಾತ್ರಿ 10:15 ಕ್ಕೆ ಪರಸ್ಪರ ಜೋಡಿಸುವ (Docking) ಮತ್ತು ಪ್ರತ್ಯೇಕಿಸುವ (Undocking) ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವ ಎರಡು ಬಾಹ್ಯಾಕಾಶ ನೌಕೆಗಳನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (Satish Dhawan Space Center) ಯಶಸ್ವಿಯಾಗಿ ಉಡಾಯಿಸಿದೆ.
ಭಾರತವು ಅಂತಹ ಅತ್ಯಾಧುನಿಕ ಬಾಹ್ಯಾಕಾಶ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ.