ದುಬೈ : ದುಬೈ ಆಡಳಿತಗಾರ ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನ ಮಂತ್ರಿ ಹೈನೆಸ್ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್, ಅವರ ಆಶ್ರಯದಲ್ಲಿ ನಡೆದ ಅರಬ್ ಯುವ ಮಾಧ್ಯಮ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಮಾನವೀಯ ಕೆಲಸ ಮತ್ತು ಯುವ ವ್ಯವಹಾರಗಳ ರಾಜನ ಪ್ರತಿನಿಧಿಯಾದ ಹಿಸ್ ಹೈನೆಸ್ ಶೇಖ್ ನಾಸರ್ ಬಿನ್ ಹಮದ್ ಅಲ್ ಖಲೀಫಾರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಯುವಕರನ್ನು ಸಬಲೀಕರಣಗೊಳಿಸಲು , ಆಧುನೀಕರಿಸಲು ಅವಕಾಶಗಳನ್ನು ಒದಗಿಸುವ ಮೂಲಕ, ಅವರ ಆಲೋಚನೆಗಳನ್ನು ಕಾರ್ಯಗತಗೊಳಿಸಲು ಆತ್ಮವಿಶ್ವಾಸವನ್ನು ತುಂಬುವ ಮೂಲಕ ಮತ್ತು ನಂಬಿಕೆ ಮತ್ತು ಭರವಸೆಯ ಸಂಸ್ಕೃತಿಯನ್ನು ಬೆಳೆಸುವ ಮೂಲಕ ಬಹ್ರೇನ್ನ ಸಬಲೀಕರಣದ ಪ್ರಯತ್ನಗಳನ್ನು ಹಿಸ್ ಹೈನೆಸ್ ಎತ್ತಿ ತೋರಿಸಿದರು.