ಬೆಂಗಳೂರು : ದರ್ಶನ್ ತೂಗುದೀಪ್ ಪರಪ್ಪನ ಅಗ್ರಹಾರ ಜೈಲಿನ ಊಟ ತಿಂದು, ತಿಂದು ವಾಂತಿ & ಭೇದಿ ಶುರುವಾಗಿರುವ ಕಾರಣಕ್ಕೆ ಸುಮಾರು 10 ಕೆಜಿ ತೂಕ ಕಳೆದುಕೊಂಡಿದ್ದಾರೆ ಎನ್ನಲಾಗಿದೆ
ದರ್ಶನ್ಗೆ ಮನೆ ಊಟ ನೀಡಬೇಕು ಎಂದು ಕೋರ್ಟ್ಗೆ ಅರ್ಜಿ ಹಾಕಿದ್ದರು . ನಟ ದರ್ಶನ್ ಪರ ವಕೀಲರು. ವಿಚಾರಣೆ ವೇಳೆ ದರ್ಶನ್ ಜೈಲಿನಲ್ಲಿ ಅನುಭವಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನ ದರ್ಶನ್ ಪರ ವಕೀಲರು ಈಗ ಕೋರ್ಟ್ ಎದುರು ಇಟ್ಟಿದ್ದಾರೆ. ಹೀಗೆ ಮಾನ್ಯ ನ್ಯಾಯಾಧೀಶರು ಎರಡೂ ಕಡೆಯ ವಕೀಲರ ವಾದ ಆಲಿಸುತ್ತಿದ್ದಾರೆ.
ದರ್ಶನ್ ಆರೋಗ್ಯ ಹದಗೆಡುತ್ತಿರುವ ಕಾರಣಕ್ಕೆ ಮನೆ ಊಟದ ವ್ಯವಸ್ಥೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.ಕೋರ್ಟ್ನಲ್ಲಿ ವಿಚಾರಣೆಯನ್ನು ಶುರು ಮಾಡಲಾಗಿದ್ದು ಇನ್ನೇನು ಒಂದೆರಡು ದಿನಗಳಲ್ಲಿ ತೀರ್ಪು ಹೊರಬೀಳುವ ಸಾಧ್ಯತೆ ಇದೆ