ಮಂಗಳೂರು :ಬೋಳೂರಿನ ಜಾರಂದಾಯ ದೈವ ಸ್ಥಾನ ಮತ್ತು ಬೋಳೂರು ಬಿಲ್ಲವ ಗ್ರಾಮ ಸಮಿತಿಯ ಆಶ್ರಯದಲ್ಲಿ , ಶ್ರೀ ನಾರಾಯಣ ಗುರು ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ಸಹಭಾಗಿತ್ವದಲ್ಲಿ , ಆರ್ಥಿಕವಾಗಿ ಹಿಂದುಳಿದ, ವಿಧ್ಯಾಭ್ಯಾಸದಲ್ಲಿ ನಿಪುಣರಾಗಿರುವ 33 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು 10 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ನವ ದೆಹಲಿಯ ಉದ್ಯಮಿ ಅನುರೂಪ್ ಕಂಪನಿಯ ಉಪಾಧ್ಯಕ್ಷರಾದ ಸಂತೋಷ್ ಪೂಜಾರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಅದರ ಸದುಪಯೋಗಗೊಳಿಸಿ , ಜೀವನದಲ್ಲಿ ಅತ್ಯುನ್ನತ ಪ್ರಗತಿಯನ್ನು ಸಾಧಿಸ ಬೇಕೆಂದು ಉಪದೇಶಿಸಿದರು, ಇಂತಹ ಕಾರ್ಯವು ದೇವರ ಕಾರ್ಯ, ಪುಣ್ಯದ ಕೆಲಸ ಎಂದು, ಸಂಘಟಕರ ಸಂಘಟನಾ ಪ್ರವರ್ತಿಯನ್ನು ಪ್ರಶಂಶಿಸಿ, ಕ್ರಥಜ್ಞತೆಯನ್ನು ಅರ್ಪಿಸಿದರು ಮತ್ತು ಶ್ರೀ ನಾರಾಯಣ ಗುರುಗಳ ಸಂಘಟನೆಯಿಂದಲೇ ಶಕ್ತರಾಗಿರಿ ಎಂಬ ಸಂದೇಶವನ್ನು ಸ್ಪಷ್ಟಪಡಿಸಿದರು.
ವೇಧವ್ಯಾಸರು ತಾವು ಎಷ್ಟೇ ಕಾರ್ಯನಿರತರಾಗಿದ್ದರೂ ಈ ಜಾರಂದಾಯ ಕ್ಷೇತ್ರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ತಮಗೆ ಬಲು ಪ್ರಿಯವೆಂದು ಕ್ಷೇತ್ರದ ಬಗ್ಗೆ ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸಿದರು. ವಿಧಾರ್ಥಿಗಳನ್ನು ಉದ್ಧೇಶಿಸಿ ಜೀವನದಲ್ಲಿ ಸಹನೆ ಅತಿ ಮುಖ್ಯ, ತಮ್ಮ ಪೋಷಕರೊಂದಿಗೆ ಗೌರವದಿಂದ ವರ್ತಿಸಿರಿ ಎಂದು ಉಪದೇಶಿಸಿದರು.
ನೆರೆದಿರುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ತಮ್ಮ ಅಧಿಕಾರವನ್ನು ಉಪಯೋಗಿಸಿ ಸಾಮಾಜಿಕ ಕಳಕಳಿಯಿಂದ ಕರ್ತವ್ಯದಲ್ಲಿ ತೊಡಗಿಸಲು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅತಿಥಿಗಳು ಸ್ಪೂರ್ತಿಯಾಗಲಿ ಎಂದು ವಾಲ್ಟರ್ ನಂದಳಿಕೆ ತಮ್ಮ ಆಶಯವನ್ನು ತಿಳಿಸಿದರು.
ಅರ್ಚನಾ ಸಚಿತ್ ರವರು ಇಂದು ವಿಧಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ತಮ್ಮ ವಿಧ್ಯಾಭಾಸವನ್ನು ಯಾವ ಕೊರತೆಯು ಇಲ್ಲದೆ ಮುಂದುವರಿಯಲು ಸಹಾಯ ಮಾಡಿದ ಸಂಘಟನೆಗೆ ಕೃತಜ್ಞರಾಗಿದ್ದು, ತಾವು ಯಶಶ್ವಿಯಾಗಿ ಮುಂದೆ ಸಂಘಟನೆಯ ಇಂತಹ ಪುಣ್ಯ ಕಾರ್ಯಗಳಿಗೆ ಸಹಾಯಹಸ್ತವನ್ನು ನೀಡಬೇಕೆಂದು ತಿಳಿಸಿದರು.
ಅಧ್ಯಕ್ಷರಾಗಿ ಶಾಸಕರಾದ ವೇಧವ್ಯಾಸ್ ಕಾಮತ್ ರವರು ಕಾರ್ಯಕ್ರಮಕ್ಕೆ ಮೆರಗು ನೀಡಿದರು, ದಾಯ್ಜಿ ವರ್ಲ್ಡ್ ಸಂಸ್ಥಾಪಕರಾದ ವಾಲ್ಟರ್ ನಂದಳಿ ಕೆ, ಯೆಯ್ಯಾಡಿ ಯಾಮಿನಿ ಬಿಲ್ಡರ್ಸ್ ನ ಮಾಲಕರಾದ ದಾಮೋದರ ದಂಡಕೇರಿ, ಇಂಡಿಗೋ ಏರ್ಲೈನ್ಸ್ ಸಂಸ್ಥೆಯ ಮಾಜಿ ವ್ಯವಸ್ಥಾಪಕಿ ಅರ್ಚನಾ ಸಚಿತ್, ಕಾರ್ಪೊರೇಟರ್ ಜಗದೀಶ್ ಎಂ ಶೆಟ್ಟಿ , ಎಸ್ . ಎಲ್ . ಶೇಟ್ ಜ್ಯೂವೆಲ್ಲರ್ಸ್ ಎಂಡ್ ಡೈಮಂಡ್ ಸಂಸ್ಥೆಯ ಮಾಲಕ ಪ್ರಶಾಂತ್ ಶೇಟ್, ಸಾಯಿ ಗಾರ್ಡೆನ್ ಮಾಲಕ ನಿತೇಶ್ ಸುವರ್ಣ , ಕಾಳಿ ಚರಣ್ ಫ್ರೆಂಡ್ಸ್ ಅಧ್ಯಕ್ಷ ವಿಜೇಂದ್ರ ಸಾಲಿಯಾನ್ , ಜಾರಂದಾಯ ದೈವಸ್ಥಾನ ದ ಆಡಳಿತ ಮೊಕ್ತೇಸರ ಹಾಗು ಶ್ರೀ ನಾರಾಯಣ ಗುರು ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಬಿ ಶ್ರೀಧರ್ ಕುಮಾರ್, ದೈವಸ್ಥಾನ ಮತ್ತು ಶ್ರೀ ನಾರಾಯಣ ಗುರು ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಬಲರಾಜ್ ಕೋಟ್ಯಾನ್ ರವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕ ಮಾಧವ ಸುವರ್ಣರವರನ್ನು ಸನ್ಮಾನಿಸಲಾಯಿತು.
ಕೋಶಾಧಿಕಾರಿಗಳಾದ ಕಿರಣ್ ಕುಮಾರ್ ಸಾಲ್ಯಾನ್ ಮತ್ತು ಚಂದ್ರಕಾಂತ್ ಕುಮಾರ್ , ಕಾರ್ಯದರ್ಶಿ ರಾಮ ಬಿ ಮತ್ತು ಸಂಘಟನೆಯ ಸರ್ವ ಸದಸ್ಯರು ಹಾಗು ಮಹಿಳಾ ಮಂಡಳಿಯ ಅಧ್ಯಕ್ಷರು ಹಾಗು ಸದಸ್ಯರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು