ಬಸವ ಸಮಿತಿ ಬಹರೇನ್ ಬಸವ ಜಯಂತಿ ೨೦೨೪ ಕಾರ್ಯಕ್ರಮವನ್ನು ಮೇ ೧೦ನೇ ಬಹರೇನ್ ನ ಪ್ರಮುಖ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಸ್ಟಾರ್ ವಿಷನ್ ಈವೆಂಟ್‌ನ ಸಹಯೋಗದಲ್ಲಿ ಆಯೋಜಿಸಲಾಗುವುದು
ಬಸವ ಜಯಂತಿಯ ಪ್ರಯುಕ್ತ ಬಹರೇನ್ ಬಸವ ಸಮಿತಿಯ 15 ನೇ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ “ಕಲ್ಯಾಣ ವೈಭವ”ವನ್ನು ಬಹರೇನ್ ಅಧಾರಿ ಪಾರ್ಕ್ನಲ್ಲಿರುವ ನ್ಯೂ ಸೀಸಾನ್ಸ್ ಹಾಲ್೨ ರಲ್ಲಿ ಶುಕ್ರವಾರ 10 ಮೇ , ಸಂಜೆ 5:30 ಕ್ಕೆ ಜರುಗಲಿದೆ.
ಸಮಾರಂಭದ ಮುಖ್ಯ ಅತಿಥಿಯಾಗಿ ಬಹರೈನ ಭಾರತೀಯ ರಾಯಭಾರಿ ಶ್ರೀ ವಿನೋದ್ ಕೆ ಜಾಕೋಬ್, ಗೌರವ ಅತಿಥಿಯಾಗಿ ಕ್ಯಾಪ್ಟನ್ ನವೀನ್ ರವರು ಉಪಸ್ಥಿತರಿರುವರು
ಬಸವಣ್ಣನವರ ಅಮೂಲ್ಯ ಸಂದೇಶಗಳನ್ನು ಹೊಂದಿರುವಂತಹ ವಚನ ಗಾನ ವೈಭವ ಕಾರ್ಯಕ್ರಮವನ್ನು ಪ್ರಸಿದ್ಧ ಗಾಯಕ ಡಾ. ಸುಚೇತನ್ ರಂಗಸ್ವಾಮಿ ಧ್ವನಿ ಸಂಸ್ಕೃತಿ ತಜ್ಞ ಮತ್ತು ಸಹ ಕಲಾವಿದ ಕುಮಾರ್ ಶ್ರೀನಿಧಿ ಶಾಸ್ತ್ರಿ, ಬಸವ ಸಮಿತಿ ಸದಸ್ಯರು ಮತ್ತು ಇತರ ಕಲಾವಿದರು ನಡೆಸಿ ಕೊಡಲಿದ್ದಾರೆ.
ಬಸವ ಸಮಿತಿ ಬಹರೇನ್ ಅಧ್ಯಕ್ಷ ಶ್ರೀ ಶಿವಕುಮಾರ್ ಕರಣಂರವರು ಸಾಂಪ್ರದಾಯಿಕ ನೃತ್ಯ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವರು.
400 ಕ್ಕೂ ಹೆಚ್ಚು ಜನರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದು , ಬಹ್ರೇನ್ ಮತ್ತು ಸೌದಿ ಅರೇಬಿಯಾದಲ್ಲಿರುವ ಸಂಪೂರ್ಣ ಕನ್ನಡ ಸಮುದಾಯಕ್ಕೆ ಮುಕ್ತ ಪ್ರವೇಶನ ನೀಡಲಾಗುವುದು.