ಅಂಕೋಲ, ಉತ್ತರ ಕನ್ನಡ: ಅಂಕೋಲದ ಶಿರೂರಿನಲ್ಲಿ ಗುಡ್ಡ ಕುಸಿತದ ದುರ್ಘಟನಯ ವೇಳೆ ಲೋಕೇಶ್ ಎಂಬಾತ ನಾಪತ್ತೆಯಾಗಿದ್ದು , ಆತನ ತಾಯಿ ಮಾದೇವಿ ಮಗನನ್ನು ಪತ್ತೆ ಹಚ್ಚಿ ಕೊಡಲು ಪೊಲೀಸ್ ಠಾಣೆ ಮೊರೆ ಹೋಗಿದ್ದಾರೆ.
ದುರ್ಘಟನೆಯಿಂದ ಚಹಾ ಅಂಗಡಿ ನಡೆಸುತ್ತಿದ್ದ ಒಂದೇ ಮನೆಯ ನಾಲ್ವರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಸುಮಾರು 15ಕ್ಕೂ ಹೆಚ್ಚು ಜನ ಮಣ್ಣಿನಡಿಯಲ್ಲಿ ಸಿಲುಕಿರುವರು ಎಂದು ತಿಳಿದು ಬಂದಿದ್ದು, ಗ್ಯಾಸ್ ಟ್ಯಾಂಕರ್ ಚಾಲಕ ಸೇರಿದಂತೆ ಒಟ್ಟು 7 ಮಂದಿಯ ಶವ ಪತ್ತೆಯಾಗಿದೆ.
ಮಿಲಿಟರಿ ಪಡೆಯೇ ಕಾರ್ಯಾಚರಣೆಗೆ ಸ್ಥಳಕ್ಕೆ ಧಾವಿಸಿದೆ.