VMB ತನಗೆ ಗೌರವಾನ್ವಿತ ಅಲ್ ಶಾಯಾ ಗ್ರೂಪ್‌ನಿಂದ ವಿಶಿಷ್ಠ ಆಹಾರ ಸುರಕ್ಷತಾ ಪೂರೈಕೆದಾರ ಪ್ರಶಸ್ತಿ – ಹಾಸ್ಪಿಟಾಲಿಟಿಯನ್ನು ನೀಡಲಾಗಿದೆ ತಿಳಿಸಿದರು. ಈ ಪುರಸ್ಕಾರವು ಅತ್ಯುನ್ನತ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಎತ್ತಿಹಿಡಿಯುವಲ್ಲಿ VMB ಯ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ.
“ಅಲ್ ಶಾಯಾ ಗ್ರೂಪ್‌ನಿಂದ ಈ ಮನ್ನಣೆಯು ನಮಗೆ ಅಪಾರ ಗೌರವ ನೀಡಿದೆ ” ಎಂದು VMB ಯ ಪಾಲುದಾರರಾದ ಶ್ರೀ ಹೇಮಂತ್ ಅಶರ್ ಹೇಳಿದರು. “ಈ ಪ್ರಶಸ್ತಿಯು ನಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ , ನಮ್ಮ ಪಾಲುದಾರರು ಮತ್ತು ಗ್ರಾಹಕರಿಂದ ನಾವು ಸ್ವೀಕರಿಸುವ ನಂಬಿಕೆ ಮತ್ತು ಬೆಂಬಲದ ಪ್ರತಿಬಿಂಬವಾಗಿದೆ. ಈ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ನಮ್ಮ ಪ್ರತಿಯೊಂದು ಅಂಶದಲ್ಲಿ ಶ್ರೇಷ್ಠತೆಯನ್ನು ನೀಡಲು ನಾವು ಬದ್ಧರಾಗಿದ್ದೇವೆ.